ಶ್ರಾದ್ಧವನ್ನು ಮಾಡಿದ ನಂತರ ಪಿತೃಗಳಿಗೆ ಸದ್ಗತಿ ದೊರಕುವ ಪ್ರಕ್ರಿಯೆ

‘ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು (ಇಂಧನಾತ್ಮಕ) ಆವಾಹನೆ ಮಾಡುವುದು.

ಅಸ್ಥಿಸಂಚಯ ಮತ್ತು ಅಸ್ಥಿವಿಸರ್ಜನೆ

ಅಂತ್ಯಸಂಸ್ಕಾರವಾದ ನಂತರ ಮೂರನೇ ದಿನ ಅಸ್ಥಿಯನ್ನು ಒಟ್ಟು ಮಾಡುವುದು ಹೆಚ್ಚು ಉತ್ತಮವಾಗಿದೆ. ಹತ್ತು ದಿನಗಳ ನಂತರ ಅಸ್ಥಿವಿಸರ್ಜನೆಯನ್ನು ಮಾಡುವುದಿದ್ದರೆ ತೀರ್ಥಶ್ರಾದ್ಧವನ್ನು ಮಾಡಿ ವಿಸರ್ಜನೆ ಮಾಡಬೇಕು.

ಪಿತೃತರ್ಪಣ

ದೇವರು, ಋಷಿ ಮತ್ತು ಪಿತೃಗಳನ್ನು ಉದ್ದೇಶಿಸಿ ಪ್ರತಿದಿನ ತರ್ಪಣವನ್ನು ಕೊಡಬೇಕು. ಮುಂಜಾನೆ ಸ್ನಾನದ ನಂತರ ತರ್ಪಣವನ್ನು ಕೊಡಬೇಕು. ಪಿತೃಗಳಿಗೆ ಪ್ರತಿದಿನ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಕನಿಷ್ಟಪಕ್ಷ ತರ್ಪಣವನ್ನಾದರೂ ಕೊಡಬೇಕು.

ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?

‘ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ರಜೋಗುಣೀ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ.