ಶಿಷ್ಯನಿಗೆ ‘ಧರ್ಮವೆಂದರೆ ಏನು?’, ಎಂಬುದನ್ನು ಕಲಿಸಿ ಅವನಿಂದ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡಿಸಿಕೊಳ್ಳುವ ಗುರುಗಳು !

ಒಳ್ಳೆಯ ಸಂಸ್ಕಾರದ ಧಾರಣೆಯೆಂದರೆ ಧರ್ಮ ! ಧೃ ಧಾರಯತಿ ಇತಿ ಧರ್ಮಃ | ಒಳ್ಳೆಯ ಸಂಸ್ಕಾರವನ್ನು ಧರಿಸಿಕೊಳ್ಳುವುದು, ಈ ರೀತಿ ಮಾಡುವುದರಿಂದ ಸದ್ವಿಚಾರಗಳು ಬರುತ್ತವೆ.

ಧರ್ಮಸಿದ್ದಾಂತಗಳು

ಧರ್ಮದಲ್ಲಿ ಸಿದ್ದಾಂತಗಳಿವೆ, ನಿಯಮಗಳಿಲ್ಲ. ನಿಯಮಗಳಿಗೆ ಅಪವಾದ ಇರಬಹುದು, ಸಿದ್ದಾಂತಗಳಿಗಿಲ್ಲ. ಸಿದ್ದಾಂತಗಳು ಬದಲಾಗುವುದಿಲ್ಲ, ಅವು ತ್ರಿಕಾಲಾಬಾಧಿತವಾಗಿರುತ್ತವೆ.

ಧರ್ಮದ ಮಹತ್ವ

ಶ್ವಾಸವಿಲ್ಲದೇ ಜೀವನವಿಲ್ಲ, ಅದರಂತೆಯೇ ಧರ್ಮವಿಲ್ಲದ ಜೀವನವು ನಿಜವಾದ ಜೀವನವಲ್ಲ, ಅದು ಪ್ರಾಣಿಗಳಂತಹ ಕೇವಲ ಅಸ್ತಿತ್ವವಿರುತ್ತದೆ.

ಭಾರತದ ಅವನತಿಯ ಕಾರಣಗಳು

ಜೀವನದಲ್ಲಿ ಆನಂದವನ್ನು ಕೊಡುವ ಧರ್ಮವನ್ನು ಮರೆತಿದ್ದು. ಧರ್ಮ, ಸಂಸ್ಕೃತಿ, ಮತ್ತು ನೈತಿಕ ಮೌಲ್ಯಗಳು ಕಾಲುಕಸಕ್ಕೆ ಸಮಾನವಾದುದರಿಂದ ಜನರು ಸ್ವಾರ್ಥಿಗಳಾದರು. ಆದುದರಿಂದ ರಾಷ್ಟ್ರವು ನಿಧಾನವಾಗಿ ಅಧಃಪತನದ ಕಡೆಗೆ ಹೊರಳತೊಡಗಿತು.

ಧರ್ಮ ಮತ್ತು ಭಾರತದ ಮಹತ್ವ

ಅತೀಸುಂದರ, ಆದುದರಿಂದಲೇ ಅತ್ಯಂತ ಪರಿಶ್ರಮಸಾಧ್ಯ ಆದರ್ಶಕ್ಕನುಸಾರ, (ಯಾವ ಆದರ್ಶವು ನಿಮ್ಮ ಭಾರತೀಯ ಪರಂಪರೆಯ ವಾರಸುದಾರವಾಗಿದೆ,) ಜೀವನವನ್ನು ನಡೆಸಲು ಭಾರತಕ್ಕೆ ಯಾವಾಗಲಾದರೂ ಅಪಯಶಸ್ಸು ಬಂದರೆ, ಸಂಪೂರ್ಣ ಮಾನವಜಾತಿಯ ಭಾವಿ ಕಲ್ಯಾಣಕ್ಕೆ ಆಪತ್ತು ಬರುವುದು.

ಹಿಂದೂ ಧರ್ಮ

‘ಹೀನಾನ ಗುಣಾನ ದೂಷಯತಿ ಇತಿ ಹಿಂದೂ |’ (ಮೇರುತಂತ್ರ ಗ್ರಂಥ). ಹಿಂದೂ ಎನ್ನುವುದು ಒಂದು (ಸತ್ತ್ವಪ್ರಧಾನ) ವೃತ್ತಿಯಾಗಿದೆ. ಅದರ ಅರ್ಥ ಸಾಧಕವಾಗಿದೆ.

ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ

‘ಶೂದ್ರರು ಅಸ್ಪೃಶ್ಯರು, ಕೇವಲ ಹುಟ್ಟನ್ನು ಆಧರಿಸುವವರು, ವೇದಗಳನ್ನು ಕಲಿಯಲು ಅವರಿಗೆ ಅವಕಾಶ ನೀಡಬಾರದು, ಬೇರೆ ವರ್ಣಗಳಿಗಿಂತ ಕೀಳುಮಟ್ಟದವರು, ಯಜ್ಞಗಳಲ್ಲಿ ಪಾಲ್ಗೊಳ್ಳಲು ಅರ್ಹತೆಯಿಲ್ಲದವರು’ ಎಂದು ವೇದಗಳಲ್ಲಿ ಎಲ್ಲಿಯೂ ಹೇಳಿಲ್ಲ.