ಭಗವದ್ಗೀತೆ ಏನು ಹೇಳುತ್ತದೆ ?
ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ.
ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ.
ಒಳ್ಳೆಯ ಮತ್ತು ಕೆಟ್ಟ ಇವುಗಳ ಭೇದವು ಗೊತ್ತಿದ್ದೂ ಯಾರು ಕೆಟ್ಟದಾಗಿ ವರ್ತಿಸುತ್ತಾರೆಯೋ, ಅವರು ಕಠೋರ ಯಾತನೆಗಳನ್ನು ಭೋಗಿಸಬೇಕಾಗುತ್ತದೆ.
ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದ ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ । ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥೪೦॥ ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ … Read more
ಅಧ್ಯಾತ್ಮ ಜ್ಞಾನ ಎಲ್ಲರಿಗೂ ಮುಟ್ಟಬೇಕು. ಆದರೆ ಇಲ್ಲಿ ಕೆಲವರಿಗೆ ಅಧಿಕಾರ ಇಲ್ಲಾ ಎಂದು ಏಕೆ ಹೇಳಿದರು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಯಾವುದೇ ಒಂದು ಅಧ್ಯಯನಕ್ಕೆ ಲಿಂಗ-ಜಾತಿ ಮಾನದಂಡವಲ್ಲ.
ನೀನು ‘ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು, ಅವನ ನಿಯಂತ್ರಣದಲ್ಲಿ ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ’ ಎಂದು ನಿರಂತರ ಪ್ರಾರ್ಥನೆ ಮಾಡು.
ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ ಬರುತ್ತದೆ; ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲವೇ ಹೊರತು ಇನ್ನೊಬ್ಬರದ್ದಲ್ಲ.