ಮದರಂಗಿ ಅಥವಾ ಮೆಹೆಂದಿ
ಮದರಂಗಿಯನ್ನು ಕೇವಲ ಒಂದು ಮನರಂಜನೆಯ ಸಾಧನ ಅಥವಾ ಉಪಚಾರವೆಂದು ನೋಡದೆ ಅದರ ಇತಹಾಸ ಮತ್ತು ಮಹತ್ವವನ್ನು ತಿಳಿದುಕೊಳ್ಳಬೇಕು.
ಮದರಂಗಿಯನ್ನು ಕೇವಲ ಒಂದು ಮನರಂಜನೆಯ ಸಾಧನ ಅಥವಾ ಉಪಚಾರವೆಂದು ನೋಡದೆ ಅದರ ಇತಹಾಸ ಮತ್ತು ಮಹತ್ವವನ್ನು ತಿಳಿದುಕೊಳ್ಳಬೇಕು.
‘ಮದರಂಗಿ’ಯು ಸ್ತ್ರೀಯರ ಪ್ರಕೃತಿಪ್ರಧಾನ ಕಾರ್ಯವನ್ನು ಮಾಡಲು ಹೆಚ್ಚು ಪುಷ್ಟಿಯನ್ನು ನೀಡುವುದರಿಂದ ಅದು ಸ್ತ್ರೀಯರ ಸೌಂದರ್ಯ, ಮೋಹಕತೆ ಮತ್ತು ಅವರ ಕೋಮಲತೆಯನ್ನು ಅರಳಿಸುವಂತಹದ್ದಾಗಿದ್ದರಿಂದ ಅದು ಪುರುಷರಿಗಿಂತ ಸ್ತ್ರೀಯರ ಪ್ರಕೃತಿಗೆ ಹೆಚ್ಚು ಪೋಷಕವಾಗಿರುತ್ತದೆ.
ಸಮಾಜದಲ್ಲಿನ ಮದರಂಗಿಗಳನ್ನು ಬಿಡಿಸುವ ವ್ಯಕ್ತಿಗಳು ಮತ್ತು ಬಿಡಿಸಿಕೊಳ್ಳುವ ಸ್ತ್ರೀಯರು, ಹಾಗೆಯೇ ಆ ವಿನ್ಯಾಸಗಳನ್ನು ನೋಡುವವರಿಗೆ ಇಲ್ಲಿ ನೀಡಿರುವ ಸಾತ್ತ್ವಿಕ ವಿನ್ಯಾಸಗಳಿಂದ ಆಧ್ಯಾತ್ಮಿಕ ಲಾಭವಾಗಬೇಕು ಮತ್ತು ಅವರಲ್ಲಿ ಸಾತ್ತ್ವಿಕತೆಯ ಸೆಳೆತ ನಿರ್ಮಾಣವಾಗಬೇಕೆಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ.
ರೂಪವು ಸತ್ತ್ವಗುಣದ ಕಡೆಗೆ ಎಷ್ಟು ಧಾವಿಸುತ್ತದೆಯೋ, ಅಷ್ಟು ಹೆಚ್ಚು ಪ್ರಮಾಣದಲ್ಲಿ ಅದು ದೇವತೆಗಳ ತತ್ತ್ವಗಳ ಸತ್ತ್ವಗುಣಿ ಲಹರಿಗಳನ್ನು ಆಕರ್ಷಿಸಲು ಪೂರಕವಾಗಿರುತ್ತದೆ. ರೂಪದಲ್ಲಿರುವ ಬಣ್ಣದಿಂದ ದೇವತೆಯ ತತ್ತ್ವ ಜಾಗೃತವಾಗುತ್ತದೆ; ಆದುದರಿಂದ ರೂಪದೊಂದಿಗೆ ಬಣ್ಣಕ್ಕೂ ಮಹತ್ವವಿದೆ.