ಸತ್ಸಂಗ 1 : ಸಾಧನೆಯ ಸಿದ್ಧಾಂತ ಮತ್ತು ಸಾಧನೆಯ ತತ್ತ್ವಗಳು

ಇಷ್ಟರ ವರೆಗೆ ಆಗಿರುವ 3 ಪ್ರವಚನಗಳಲ್ಲಿ ನಾವು ಅಧ್ಯಾತ್ಮದ ಮಹತ್ವ, ಕುಲದೇವತೆ ಮತ್ತು ದತ್ತಗುರುಗಳ ನಾಮಜಪದ ಮಹತ್ವ, ಕರ್ಮಫಲಸಿದ್ಧಾಂತ, ನಾಮಜಪದಿಂದಾಗುವ ವಿವಿಧ ಲಾಭ ಹಾಗೂ ನಾಮಜಪ ಹೇಗೆ ಕಾರ್ಯ ಮಾಡುತ್ತದೆ ಎಂಬ ವಿಷಯಗಳನ್ನು ತಿಳಿದುಕೊಂಡೆವು. ಇಂದಿನ ಸತ್ಸಂಗದಲ್ಲಿ ನಾವು ಸಾಧನೆಯ ಸಿದ್ಧಾಂತ ಹಾಗೂ ಮಟ್ಟಾನುಸಾರ ಸಾಧನೆಯನ್ನು ತಿಳಿದುಕೊಳ್ಳೋಣ. ಅ. ಸಾಧನೆಯ ಸಿದ್ಧಾಂತ ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾ ಮಾರ್ಗಗಳು ಸಾಧನೆಯ ಮಹತ್ವದ ಸಿದ್ಧಾಂತವೆಂದರೆ, ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನೆಯ ಮಾರ್ಗಗಳು! ಜ್ಞಾನಯೋಗ, … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 3)

ನಮ್ಮ ಪ್ರತಿಯೊಬ್ಬರ ಧಾವಂತವು ಆನಂದ ಪ್ರಾಪ್ತಿಗಾಗಿ ಇದ್ದರೂ, ಈಗ ಎಲ್ಲರ ಜೀವನ ಸಂಘರ್ಷಮಯ ಮತ್ತು ಒತ್ತಡದಿಂದ ಕೂಡಿದೆ. ಒತ್ತಡರಹಿತ ಮತ್ತು ಆನಂದಿ ಜೀವನ ನಡೆಸಲು ಅಧ್ಯಾತ್ಮವನ್ನು ಕೃತಿಯಲ್ಲಿ ತರುವುದು ಅಂದರೆ ಸಾಧನೆ ಮಾಡುವುದು ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿದೆ. ಈ ಮಾಲಿಕೆಯಲ್ಲಿ ಮೂರನೆಯ ಪ್ರವಚನದಲ್ಲಿ  ಇಂದು ನಾವು ನಾಮಜಪದಿಂದ ಆಗುವ ಲಾಭ ಮತ್ತು ಸತ್ಸಂಗದ ಮಹತ್ವ ಈ ವಿಷಯ ನೋಡುವವರಿದ್ದೇವೆ. ಅಧ್ಯಾತ್ಮದ ಪ್ರಮಾಣ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 2)

ಸಾಧನೆಯ ಪ್ರಾಥಮಿಕ ಅಂಗಗಳು ಇಂದಿನ ಪ್ರವಚನದಲ್ಲಿ ನಾವು ಸುಖ ದುಃಖದ ಪರಿಕಲ್ಪನೆ, ಕರ್ಮಫಲ ಸಿದ್ದಾಂತ, ಸಾಧನೆಯಿಂದ ಪ್ರಾರಬ್ಧ ಸಹ್ಯ ಹೇಗೆ ಆಗುತ್ತದೆ, ಮತ್ತು ಕುಲದೇವರ ನಾಮಜಪದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಸುಖ ದುಃಖ ಅ. ಸುಖ ದುಃಖದ ಸ್ವರೂಪ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸುಖ ಮತ್ತು ದುಃಖದ ಕ್ಷಣಗಳ ಅನುಭವ ಪಡೆದಿದ್ದೇವೆ. ಪ್ರತಿಯೊಬ್ಬರ ಒದ್ದಾಟ ಸುಖಪ್ರಾಪ್ತಿಗಾಗಿಯೇ ಇರುತ್ತದೆ, ಆದರೆ ಬಹಳಷ್ಟು ಸನ್ನಿವೇಶಗಳಲ್ಲಿ ದುಃಖವೇ ನಮ್ಮ ಪಾಲಿಗೆ ಬಂದಿರುತ್ತದೆ ಎಂದು ನಾವು ನೋಡುತ್ತೇವೆ. ಸಾಮಾನ್ಯವಾಗಿ ಈಗಿನ ಕಾಲದ ಮಾನವನ … Read more

ಆನ್‌ಲೈನ್ ಸಾಧನಾ ಸತ್ಸಂಗ (ಪ್ರವಚನ – 1)

ವಿಷಯ ಪ್ರವೇಶ ಮತ್ತು ಪ್ರವಚನದ ಉದ್ದೇಶ ಸನಾತನ ಸಂಸ್ಥೆಯು ಅಧ್ಯಾತ್ಮಪ್ರಸಾರ ಮಾಡುವ ಒಂದು ಸಂಸ್ಥೆಯಾಗಿದೆ. ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಸಿ ಕೊಡುವುದು ಹಾಗೂ ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸಿಕೊಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಭಾರತ ದೇಶವು ಜಗತ್ತಿನ ಆಧ್ಯಾತ್ಮಿಕ ರಾಜಧಾನಿಯಾಗಿದೆ. ಇಡೀ ಜಗತ್ತಿನ ಜನರು ಮನಃಶಾಂತಿ ಪಡೆಯಲು ಭಾರತಕ್ಕೆ ಬರುತ್ತಾರೆ. ಸನಾತನ ಸಂಸ್ಕೃತಿಯು ಭಾರತದ ಆತ್ಮವಾಗಿದೆ; ಆದರೆ ದುರಾದೃಷ್ಟವೆಂದರೆ ಅಧ್ಯಾತ್ಮ ಅಥವಾ ಸಾಧನೆಯ ಶಿಕ್ಷಣವು ದೊರಕದ ಕಾರಣ … Read more

ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಪ್ರವಚನ

  ದಕ್ಷಿಣ ಕನ್ನಡ ಜಿಲ್ಲೆ : 24.8.2018 ನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಮಂಗಳೂರಿನ ಕೊಣಾಜೆಯ ‘ಭುವನೇಶ್ವರಿ ಮಾತೃ ಮಂಡಳಿ’, ಬೆಳ್ತಂಗಡಿ ತಾಲೂಕಿನ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಮೂಡಬಿದ್ರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನಗಳನ್ನು ಏರ್ಪಡಿಸಲಾಗಿತ್ತು. ಪ್ರವಚನದಲ್ಲಿ ‘ಹಬ್ಬ, ಉತ್ಸವ ವ್ರತಗಳ’ ಮಹತ್ವ, ಧಾರ್ಮಿಕ ಆಚರಣೆಗಳ ಕುರಿತು ಮಾಹಿತಿ ನೀಡಲಾಯಿತು. ನೂರಾರು ಭಕ್ತರು ಈ ಪ್ರವಚನಗಳ ಲಾಭವನ್ನು ಪಡೆದುಕೊಂಡರು.