ಸತ್ಸಂಗ 4 : ನಾಮಜಪವನ್ನು ಮಾಡುವ ವಿಧಾನಗಳು
ನಾಮಜಪವನ್ನು ಮಾಡುವ ವಿಧಾನಗಳು ಇಲ್ಲಿಯವರೆಗೆ ನಾಮಜಪದ ಮಹತ್ವ ಮತ್ತು ಲಾಭಗಳನ್ನು ತಿಳಿದುಕೊಂಡೆವು. ನೀವು ಈಗಾಗಲೇ ಆ ಜಪಗಳನ್ನು ಮಾಡಲು ಆರಂಭಿಸಿರಲೂಬಹುದು. ನಾಮಜಪವನ್ನು ಮಾಡುವಾಗ ಮನಸ್ಸು ಏಕಾಗ್ರವಾಗುವುದಿಲ್ಲ, ಮನಸ್ಸು ವಿಚಾರಗಳಲ್ಲಿಯೇ ಸಿಲುಕಿಕೊಳ್ಳುವುದರಿಂದ ನಾಮಜಪವು ನಿಂತು ಹೋಗುತ್ತದೆ ಅಥವಾ ನಾಮಜಪವನ್ನು ಮಾಡುವುದು ಮರೆತು ಹೋಗುತ್ತದೆ ಹೀಗೂ ಕೆಲವರ ಅನುಭವಕ್ಕೆ ಬಂದಿರುತ್ತದೆ. ನಾಮಜಪವು ಹೆಚ್ಚು ಹೆಚ್ಚು ಉತ್ತಮವಾಗಿ ಆಗುವ ದೃಷ್ಟಿಯಿಂದ ನಾಮಜಪವನ್ನು ಮಾಡುವ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ. ಲಿಖಿತ ನಾಮಜಪ ಪ್ರಾಥಮಿಕ ಹಂತದಲ್ಲಿ ನಾವು ‘ಲಿಖಿತ ನಾಮಜಪ’ವನ್ನು ಮಾಡಬಹುದು. … Read more