ಸಾಧನಾವೃದ್ಧಿ ಸತ್ಸಂಗ (1)

ಈ ಲೇಖನಮಾಲೆಯಲ್ಲಿ ನಾವು ಸಾಧನೆಯ ಪ್ರಯತ್ನಗಳ ಸಮೀಕ್ಷೆಯನ್ನು ಮಾಡಲಿದ್ದೇವೆ. ನಾವು ಇಲ್ಲಿಯ ತನಕ ಪ್ರತಿದಿನ ಕುಲದೇವರು ಮತ್ತು ದತ್ತಾತ್ರೇಯ ದೇವರ ನಾಮಜಪದ ಮಹತ್ವವನ್ನು ಅರಿತುಕೊಂಡಿದ್ದೆವು. ಜೊತೆಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು ಮತ್ತು ಸ್ವಯಂಸೂಚನೆಯ ಸತ್ರಗಳನ್ನು ಹೇಗೆ ಮತ್ತು ಏಕೆ ಮಾಡಬೇಕು ಎಂದು ಸಹ ತಿಳಿದುಕೊಂಡಿದ್ದೆವು. ಸಾಧನೆಯ ವರದಿಯನ್ನು ನೀಡುವಾಗ ನಮ್ಮ ಪ್ರಯತ್ನಗಳು ಎಷ್ಟು ಆಗುತ್ತಿವೆ ಎಂದು ವಸ್ತುನಿಷ್ಠವಾಗಿ ಗಮನಕ್ಕೆ ಬರುತ್ತದೆ. ಅದರಿಂದ ನಮ್ಮ ಸಾಧನೆಯ ಅವಲೋಕನವನ್ನು ಮಾಡಲು ಸಾಧ್ಯವಾಗುತ್ತದೆ. ಅದರಿಂದ ನಮ್ಮ ಪ್ರಯತ್ನಗಳು … Read more

ಸತ್ಸಂಗ 11 : ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಪರಿಚಯ

ಹಿಂದಿನ ಸತ್ಸಂಗದಲ್ಲಿ ನಾವು ಭಾವವೆಂದರೇನು, ಭಾವ ಮತ್ತು ಭಾವನೆಗಳ ವ್ಯತ್ಯಾಸ, ಹಾಗೆಯೇ ಭಾವಜಾಗೃತಿಯ ಪ್ರಯತ್ನಗಳಲ್ಲಿ ಮಾನಸ ಪೂಜೆಯ ಮಹತ್ವ ಮತ್ತು ಅದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡೆವು. ಭಾವವಿದ್ದಲ್ಲಿ ದೇವರು ಇರುತ್ತಾರೆ ಎಂದು ಹೇಳಿರುವುದರಿಂದ ನಾಮಜಪ, ಪ್ರಾರ್ಥನೆ, ಕೃತಜ್ಞತೆಯೊಂದಿಗೆ, ಮಾನಸ ಪೂಜೆ ಎಂಬ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿ ಭಗವಂತನ ಅಖಂಡ ಅನುಸಂಧಾನದಲ್ಲಿರಲು ಹೇಗೆ ಸಾಧ್ಯವಾಗುತ್ತದೆ ಎಂದೂ ಕಲಿತೆವು. ಅಷ್ಟಾಂಗ ಸಾಧನೆಯ ಅಂಶಗಳನ್ನು ತಿಳಿದುಕೊಳ್ಳುವಾಗ ನಾವು ಸ್ವಭಾವದೋಷ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ಇಂದು ನಾವು ವಿಸ್ತಾರವಾಗಿ ಈ ಪ್ರಕ್ರಿಯೆಯ … Read more

ಸತ್ಸಂಗ 10 – ಭಾವಜಾಗೃತಿಯ ಪ್ರಯತ್ನ (ಮಾನಸ ಪೂಜೆ)

ಇಂದಿನ ಸತ್ಸಂಗದಲ್ಲಿ ನಾವು ಭಾವಜಾಗೃತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಸಾಧನೆಯಲ್ಲಿ ಭಾವಕ್ಕೆ ಅಸಾಧಾರಣ ಮಹತ್ವ ಇದೆ. ಭಾವವಿದ್ದಲ್ಲಿ ದೇವರು, ಅಂದರೆ ಎಲ್ಲಿ ಭಾವವಿರುತ್ತದೆ ಅಲ್ಲಿ ಭಗವಂತನ ಅಸ್ತಿತ್ವ ಇರುತ್ತದೆ, ಎಂದು ಹೇಳುತ್ತಾರೆ. ಭಾವ ಎಂದರೆ ಏನು, ಅದರ ಮಹತ್ವ ಏನು, ಮತ್ತು ಭಾವಜಾಗೃತಿಗಾಗಿ ಯಾವ ಪ್ರಯತ್ನಗಳನ್ನು ಮಾಡಬಹುದು ಎಂದು ನಾವೀಗ ತಿಳಿದುಕೊಳ್ಳೋಣ. ಭಾವ ಎಂದರೆ ಏನು ? ಭಾವ ಪದದ ಉತ್ಪತ್ತಿ ಮತ್ತು ಅರ್ಥ ಭಾವ ಪದ ಭಾ ಮತ್ತು ವ ಈ ಎರಡು ಅಕ್ಷರಗಳಿಂದ ಕೂಡಿದೆ. ಇದರಲ್ಲಿ … Read more

ಸತ್ಸಂಗ 9 : ಅಷ್ಟಾಂಗ ಸಾಧನೆ

ಅಷ್ಟಾಂಗ ಸಾಧನೆ ಸಾಧನೆ ಮಾಡುವಾಗ ಗುರುಕೃಪೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಶಿಷ್ಯನ ನಿಜವಾದ ಪ್ರಗತಿಯು ಗುರುಕೃಪೆಯಿಂದಲೇ ಆಗುತ್ತದೆ; ಆದ್ದರಿಂದಲೇ ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಮ್’, ಅಂದರೆ ಶಿಷ್ಯನ ಪರಮಮಂಗಲವು ಗುರುಕೃಪೆಯಿಂದಲೇ ಸಾಧ್ಯವಿದೆ ಎಂದು ಹೇಳಲಾಗಿದೆ. ಗುರುಗಳು ವಿವಿಧ ಮಾಧ್ಯಮಗಳಿಂದ ಶಿಷ್ಯನಿಗೆ ಕಲಿಸುತ್ತಿರುತ್ತಾರೆ, ಆತನನ್ನು ರೂಪಿಸುತ್ತಿರುತ್ತಾರೆ. ಗುರುಕೃಪೆಯ ಮಾಧ್ಯಮದಿಂದ ವ್ಯಕ್ತಿಯು ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗವನ್ನು ಕ್ರಮಿಸುವುದನ್ನೇ ಗುರುಕೃಪಾಯೋಗ ಎನ್ನುತ್ತಾರೆ. ಸಾಧನೆಯ ವಿಧಗಳು ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಎರಡು ಅಂಗಗಳಿವೆ. ಒಂದು ವ್ಯಷ್ಟಿ ಸಾಧನೆ ಮತ್ತು ಎರಡನೆಯದು ಸಮಷ್ಟಿ ಸಾಧನೆ. ವ್ಯಷ್ಟಿ ಸಾಧನೆ … Read more

ಸತ್ಸಂಗ 8 : ಸತ್ಸಂಗದ ಮಹತ್ವ

ಸಾಧನೆಯನ್ನು ಮಾಡುತ್ತಿರುವಾಗ ನಾಮಜಪವು ಸಾಧನೆಯ ಅಡಿಪಾಯವಾಗಿರುತ್ತದೆ. ಸತ್ಸಂಗದಿಂದ ಅಡಿಪಾಯ ಗಟ್ಟಿಯಾಗಲು ಸಹಾಯವಾಗುತ್ತದೆ. ಸತ್ಸಂಗದಿಂದ ನಮ್ಮ ಸಾಧನೆಯು ಸ್ಥಿರವಾಗುತ್ತದೆ. ಹಾಗಾಗಿ ಇಂದು ನಾವು ಸತ್ಸಂಗದ ಮಹತ್ವವೇನು ಎಂದು ತಿಳಿದುಕೊಳೋಣ. ಸತ್ಸಂಗ ಎಂದರೆ ಏನು? ಸತ್ಸಂಗ ಎಂದರೆ ಸತ್ ನ ಸಂಗ. ಸತ್ ಅಂದರೆ ಈಶ್ವರ ಅಥವಾ ಬ್ರಹ್ಮತತ್ತ್ವ ಮತ್ತು ಸಂಗ ಎಂದರೆ ಸಹವಾಸ! ಪ್ರತ್ಯಕ್ಷ ಈಶ್ವರನ ಸಹವಾಸ ಸಿಗುವುದು ಅಸಾಧ್ಯ. ಸಂತರು ಈಶ್ವರನ ಸಗುಣ ರೂಪವಾಗಿರುವುದರಿಂದ ಸಂತರ ಸಹವಾಸವೇ ನಮಗೆ ಸರ್ವಶ್ರೇಷ್ಠ ಸತ್ಸಂಗವಾಗುತ್ತದೆ. ಆದರೆ ನಮಗೆ ಸಂತರ ಸಹವಾಸ … Read more

ಸತ್ಸಂಗ 7 : ಕೃತಜ್ಞತೆ

ಕಳೆದ ಸತ್ಸಂಗದಲ್ಲಿ ನಾವು ದೇವರಿಗೆ ಪ್ರಾರ್ಥನೆಯನ್ನು ಮಾಡುವುದರ ಮಹತ್ವವನ್ನು ತಿಳಿದುಕೊಂಡೆವು. ಪ್ರಾರ್ಥನೆ ಮಾಡುವಾಗ ದೇವರಲ್ಲಿ ಏನನ್ನು ಬೇಡಬೇಕು, ಪ್ರಾರ್ಥನೆ ಮಾಡುವುದರ ಮಹತ್ವವನ್ನು ಗಮನದಲ್ಲಿರಿಸಿಕೊಂಡು ನಾವು ಆಧ್ಯಾತ್ಮಿಕ ಸ್ತರದ ಕೆಲವು ಪ್ರಾರ್ಥನೆಗಳ ಉದಾಹರಣೆಗಳನ್ನೂ ನೋಡಿದೆವು. ಹೆಚ್ಚು ಹೆಚ್ಚು ಪ್ರಾರ್ಥನೆಯಾಗಲು ಕೆಲವು ಪ್ರಯತ್ನಗಳನ್ನು ಮಾಡುವುದಾಗಿ ನಿರ್ಧರಿಸಿದ್ದೆವು. ಉದಾ. ಪ್ರಾರ್ಥನೆಯ ನೆನಪಾಗಲು ಮೊಬೈಲ್ ನಲ್ಲಿ ಅಲಾರ್ಮ್ ಹಾಕಿಡುವುದು. ಪ್ರಾರ್ಥನೆಯ ಕಾಗದವನ್ನು ಕಣ್ಣಿಗೆ ಕಾಣುವ ಜಾಗದಲ್ಲಿ ಗೋಡೆಗೆ ಅಂಟಿಸಿಡುವುದು ಇತ್ಯಾದಿ. ಹಿಂದಿನ ಸತ್ಸಂಗದಲ್ಲಿ ನಾವು ದೈನಂದಿನ ಕೃತಿಗಳನ್ನು ಮಾಡುತ್ತಿರುವಾಗ ಆಧ್ಯಾತ್ಮಿಕ ಸ್ತರದಲ್ಲಿ ನಾವು … Read more

ಸತ್ಸಂಗ 6 : ಪ್ರಾರ್ಥನೆ

ನಾವು ಅನೇಕ ಬಾರಿ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಬೆಳಗ್ಗೆ ಎದ್ದ ನಂತರ, ದೇವರ ಪೂಜೆಯನ್ನು ಮಾಡುವಾಗ, ಮನೆಯಿಂದ ಹೊರಗೆ ಬೀಳುವಾಗ, ಕೆಲವೊಮ್ಮೆ ದೇವಸ್ಥಾನಕ್ಕೆ ದೇವರದರ್ಶನಕ್ಕೆ ಹೋದಾಗ ಅಥವಾ ಕಠಿಣ ಪ್ರಸಂಗವನ್ನು ಎದುರಿಸುವ ಸಮಯ ಬಂದರೆ, ದೇವರಿಗೆ ಮನಸ್ಸಿನಲ್ಲಿಯೇ ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡುತ್ತೇವೆ. ಹಾಗಾದರೆ ಇಂದು ನಾವು ಪ್ರಾರ್ಥನೆ ಎಂದರೆ ಏನು, ನಾವು ಪ್ರಾರ್ಥನೆಯನ್ನು ಏಕೆ ಮಾಡುತ್ತೇವೆ, ಅದರಿಂದ ನಮಗೇನು ಲಾಭವಾಗುತ್ತದೆ, ಎಂದು ತಿಳಿದುಕೊಳ್ಳೋಣ. ಪ್ರಾರ್ಥನೆಯ ಮಾಧ್ಯಮದಿಂದ ದೇವರ ಬಳಿ ಏನು ಬೇಡಬೇಕು, ವ್ಯಾವಹಾರಿಕ ವಿಷಯಗಳ ಬಗ್ಗೆ ಬೇಡಿಕೆಯಿಟ್ಟರೆ … Read more

ಸತ್ಸಂಗ 5 : ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗಲು ಮಾಡಬೇಕಾದ ಪ್ರಯತ್ನಗಳು

ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗಲು ಮಾಡಬೇಕಾದ ಪ್ರಯತ್ನಗಳು ನಾವು ನಾಮಜಪವನ್ನು ಮಾಡುತ್ತೇವೆ, ಆಗ ನಮ್ಮ ಗಮನ ಬಹಳಷ್ಟು ಸಲ ನಾಮಜಪದ ಸಂಖ್ಯೆಗಳ ಕಡೆಗೆ ಹೆಚ್ಚು ಇರುತ್ತದೆ. ಆದರೆ ನಾವು ಮಾಡುತ್ತಿರುವ ನಾಮಜಪ ನಿಜವಾಗಿಯೂ ದೇವರ ಚರಣಗಳವರೆಗೆ ತಲುಪುತ್ತಿದೆಯೇ ಎನ್ನುವ ಅನುಭೂತಿಯನ್ನು ನಾವು ಪಡೆಯಬೇಕು. ಇದರರ್ಥ ನಾಮಜಪದ ಸಂಖ್ಯೆಯತ್ತ ಗಮನ ನೀಡಬಾರದು ಎಂದಲ್ಲ! ಸಾಧನೆಯ ಪ್ರಾಥಮಿಕ ಹಂತದಲ್ಲಿ ಸಂಖ್ಯಾತ್ಮಕ ನಾಮಜಪವೂ ಅಷ್ಟೇ ಮಹತ್ವದ್ದಾಗಿದೆ. ಆದರೆ ಸಂಖ್ಯಾತ್ಮಕ ನಾಮಜಪ ಮಾಡುತ್ತಾ, ಮಾಡುತ್ತಾ, ನಾವು ಮನಸ್ಸಿನಲ್ಲಿ ಈಶ್ವರನನ್ನು ಅನುಭವಿಸುತ್ತಾ … Read more

ಸತ್ಸಂಗ 4 : ನಾಮಜಪವನ್ನು ಮಾಡುವ ವಿಧಾನಗಳು

ನಾಮಜಪವನ್ನು ಮಾಡುವ ವಿಧಾನಗಳು ಇಲ್ಲಿಯವರೆಗೆ ನಾಮಜಪದ ಮಹತ್ವ ಮತ್ತು ಲಾಭಗಳನ್ನು ತಿಳಿದುಕೊಂಡೆವು. ನೀವು ಈಗಾಗಲೇ ಆ ಜಪಗಳನ್ನು ಮಾಡಲು ಆರಂಭಿಸಿರಲೂಬಹುದು. ನಾಮಜಪವನ್ನು ಮಾಡುವಾಗ ಮನಸ್ಸು ಏಕಾಗ್ರವಾಗುವುದಿಲ್ಲ, ಮನಸ್ಸು ವಿಚಾರಗಳಲ್ಲಿಯೇ ಸಿಲುಕಿಕೊಳ್ಳುವುದರಿಂದ ನಾಮಜಪವು ನಿಂತು ಹೋಗುತ್ತದೆ ಅಥವಾ ನಾಮಜಪವನ್ನು ಮಾಡುವುದು ಮರೆತು ಹೋಗುತ್ತದೆ ಹೀಗೂ ಕೆಲವರ ಅನುಭವಕ್ಕೆ ಬಂದಿರುತ್ತದೆ. ನಾಮಜಪವು ಹೆಚ್ಚು ಹೆಚ್ಚು ಉತ್ತಮವಾಗಿ ಆಗುವ ದೃಷ್ಟಿಯಿಂದ ನಾಮಜಪವನ್ನು ಮಾಡುವ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ. ಲಿಖಿತ ನಾಮಜಪ ಪ್ರಾಥಮಿಕ ಹಂತದಲ್ಲಿ ನಾವು ‘ಲಿಖಿತ ನಾಮಜಪ’ವನ್ನು ಮಾಡಬಹುದು. … Read more