ನಮ್ಮ ಪ್ರೇರಣಾಸ್ಥಾನ – ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಪರಿಚಯ ೧. ಅಂತರರಾಷ್ಟ್ರೀಯ ಖ್ಯಾತಿಯ ಸಮ್ಮೋಹನೋಪಚಾರತಜ್ಞರು ಪ.ಪೂ. ಡಾ. ಆಠವಲೆಯವರು ವೈದ್ಯಕೀಯ ಶಿಕ್ಷಣದ ನಂತರ ೧೯೭೧ ರಿಂದ ೧೯೭೮ ರ ವರೆಗೆ ಬ್ರಿಟನ್‌ನಲ್ಲಿ ಉಚ್ಚ ಶಿಕ್ಷಣವನ್ನು ಪಡೆದು ಸಮ್ಮೋಹನ ಉಪಚಾರಪದ್ಧತಿಯ ಮೇಲೆ ಸಂಶೋಧನೆ ಮಾಡಿದರು. ೧೯೬೭ ರಿಂದ ೧೯೮೩ ರ ವರೆಗೆ ಒಟ್ಟು ೧೫ ವರ್ಷಗಳಲ್ಲಿ ಅವರು ೫೦೦ ಕ್ಕಿಂತಲೂ ಹೆಚ್ಚು ಡಾಕ್ಟರರಿಗೆ ಸಮ್ಮೋಹನಶಾಸ್ತ್ರ ಮತ್ತು ಸಮ್ಮೋಹನೋಪಚಾರ ಇವುಗಳ ಸಿದ್ಧಾಂತ ಮತ್ತು ಪ್ರಾತ್ಯಕ್ಷಿಕೆಗಳ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು … Read more

ಪರಾತ್ಪರ ಗುರು ಡಾ. ಆಠವಲೆಯವರ ಜನನ ಮತ್ತು ಅವರ ಆಧ್ಯಾತ್ಮಿಕ ಪ್ರವೃತ್ತಿಯ ಕುಟುಂಬ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ೬ ಮೇ ೧೯೪೨ (ವೈಶಾಖ ಕೃಷ್ಣ ಪಕ್ಷ ಸಪ್ತಮಿ, ಕಲಿಯುಗ ವರ್ಷ ೫೦೪೪) ರಂದು ಶ್ರೀ. ಬಾಳಾಜಿ ವಾಸುದೇವ ಆಠವಲೆ ಮತ್ತು ಸೌ. ನಲಿನಿ ಬಾಳಾಜಿ ಆಠವಲೆ ಇವರಿಗೆ ಜನಿಸಿದರು.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ…

ಪ.ಪೂ. ಗುರುದೇವರ ಬಗ್ಗೆ ನನ್ನೊಳಗಿರುವ ಭಾವಭಾವನೆಗಳನ್ನು ಶಬ್ದ ರೂಪದಲ್ಲಿ ಬಿಚ್ಚಿಡುವುದು ನನ್ನಂತಹ ಬುದ್ಧಿವಾದಿಗೆ ಅಸಾಧ್ಯವಾಗಿದೆ. ನನ್ನ ಮನಸ್ಸಿನಲ್ಲಿ ಪ.ಪೂ. ಡಾಕ್ಟರರಿಗೆ ಇರುವಂತಹ ಸ್ಥಾನ ಅನಂತ ಹಾಗೂ ಶಬ್ದಾತೀತವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಗ್ರಂಥ ನಿರ್ಮಿತಿ ಮತ್ತು ಪ್ರಕಾಶನ ಕಾರ್ಯ

ಅವರು ಜನವರಿ ೨೦೧೭ ರ ವರೆಗೆ ಸಂಕಲನ ಮಾಡಿದ ೨೯೬ ಗ್ರಂಥಗಳು ವಿವಿಧ ಭಾಷೆಗಳಲ್ಲಿ ಮತ್ತು ವಿದೇಶದ ನೇಪಾಳಿ, ಜರ್ಮನ್ ಮತ್ತು ಸರ್ಬಿಯನ್ ಈ ೧೫ ಭಾಷೆಗಳಲ್ಲಿ ೬೭ ಲಕ್ಷದ ೪೦ ಸಾವಿರ ಪ್ರತಿಗಳು ಪ್ರಕಾಶಿತಗೊಂಡಿವೆ.

ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಸಾಧನೆಯ ಉದ್ದೇಶ !

ಪ್ರತಿಯೊಂದು ಕೃತಿಯಿಂದ ಸಾಧನೆಯಾಗಲು ಆ ಕೃತಿಯನ್ನು ಪರಿಪೂರ್ಣ, ಭಾವಪೂರ್ಣ ಮತ್ತು ಸಾತ್ವಿಕಕತೆಯ ವಿಚಾರವನ್ನಿಟ್ಟುಕೊಂಡು ಹೇಗೆ ಮಾಡಬೇಕೆಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಲಿಸಿದ್ದಾರೆ.

ಆಶ್ರಮದಲ್ಲಿ ಹೆಚ್ಚುತ್ತಿರುವ ಸಾತ್ವಿಕತೆಗೆ ಸಾಕ್ಷಿಯಾಗಿರುವ ದೈವೀ ಬದಲಾವಣೆಗಳು !

ಆಶ್ರಮದಲ್ಲಿನ ಸಾತ್ವಿಕತೆಗೆ ಸಾಕ್ಷಿಯೆಂಬಂತೆ ಇಲ್ಲಿ ಕಾಣಸಿಗುವ ದೈವೀ ಬದಲಾವಣೆಗಳ ಕೆಲವು ಉದಾಹರಣೆಗಳನ್ನು ನೋಡಿದರೆ, ‘ಈಶ್ವರನು ಸನಾತನದ ಮೇಲೆ ಕೃಪಾವೃಷ್ಟಿಯನ್ನೇ ಮಾಡುತ್ತಿದ್ದಾನೆ’, ಎಂಬುದರ ಅನುಭವ ಬರುತ್ತದೆ.

ಅಭೂತಪೂರ್ವ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯ !

ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮ ತೋರಿಸುವ 15,000 ಕ್ಕೂ ಹೆಚ್ಚು ಚಿತ್ರ ಮತ್ತು ವಸ್ತುಗಳು ಹಾಗೂ 27,000 ಕ್ಕೂ ಹೆಚ್ಚು ಸಿ.ಡಿ.ಗಳಾಗುವಷ್ಟು ಧ್ವನಿಚಿತ್ರೀಕರಣವನ್ನು ಸಂಶೋಧನೆಗಾಗಿ ಜತನ ಮಾಡಲಾಗಿದೆ.

ಆಧ್ಯಾತ್ಮಿಕ ಪ್ರಗತಿಗಾಗಿ ಪೂರಕ ವಾತಾವರಣ !

ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಗುರುಕೃಪಾ ಯೋಗಾನುಸಾರ ಸಾಧನೆ’ ಮಾಡಿ 19 ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

ಸಾಮಾಜಿಕ ಐಕ್ಯತೆಯ ಪ್ರತೀಕವಾಗಿರುವ ಆಶ್ರಮ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !

ಆಶ್ರಮದಲ್ಲಿ ಸಾಧಕರಿಗೆ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಕಲಿಸಲಾಗುತ್ತದೆ. ಇದರಿಂದ ಅವರಲ್ಲಿ ರಾಷ್ಟ್ರಬಂಧುತ್ವ ಮತ್ತು ಧರ್ಮಬಂಧುತ್ವ ನಿರ್ಮಾಣವಾಗಿ ಸಂಘಟಿತ ಭಾವವು ತಾನಾಗಿಯೇ ನಿರ್ಮಾಣವಾಗುತ್ತದೆ