ಶ್ರೀ ಲಕ್ಷ್ಮೀ ಪೂಜಾವಿಧಿ (ಆಶ್ವಯುಜ ಅಮಾವಾಸ್ಯೆ)

Article also available in :

ಲಕ್ಷ್ಮೀಪೂಜೆಯ ದಿನದಂದು ಎಲ್ಲಾ ದೇವಸ್ಥಾನಗಳಲ್ಲಿ, ಅಂಗಡಿಗಳಲ್ಲಿ ಹಾಗೆಯೇ ಮನೆ-ಮನೆಗಳಲ್ಲಿ ಲಕ್ಷ್ಮೀಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯ ಬಗ್ಗೆ ಇಲ್ಲಿ ಸುಲಭವಾದ ಭಾಷೆಯಲ್ಲಿ ಶಾಸ್ತ್ರೋಕ್ತವಾದ ಮಾಹಿತಿಯನ್ನು ನೀಡಲಾಗಿದೆ. -ಸಂಕಲನಕಾರರು : ಶ್ರೀ. ದಾಮೋದರ ವಝೆ, ಪೊಂಡಾ, ಗೋವಾ

ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ.

ಇತಿಹಾಸ

ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.

ಹಬ್ಬವನ್ನು ಆಚರಿಸುವ ಪದ್ಧತಿ

ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.

ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. (ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.) ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’

ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.

ಶ್ರೀ ಸರಸ್ವತಿದೇವಿಯ ಪೂಜೆ

ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು. – ಪ.ಪೂ.ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಲಕ್ಷ್ಮೀಪೂಜೆ

ಪ್ರಾರಂಭ

ಆಚಮನ, ದೇಶಕಾಲಗಳ ಉಚ್ಚಾರಣೆಯನ್ನು ಮಾಡುವುದು.

ಆಚಮನ

ಮುಂದಿನ ಮೂರು ಹೆಸರುಗಳನ್ನು ಉಚ್ಚರಿಸಿದ ನಂತರ ಪ್ರತಿಯೊಂದು ಹೆಸರಿನ ಕೊನೆಗೆ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ತೆಗೆದು ಬಲಗೈಯಲ್ಲಿ ಹಾಕಿ ಪ್ರಾಶನ ಮಾಡಬೇಕು.

ಶ್ರೀ ಕೇಶವಾಯ ನಮಃ | ಶ್ರೀ ನಾರಾಯಣಾಯ ನಮಃ | ಶ್ರೀ  ಮಾಧವಾಯ ನಮಃ |

‘ಶ್ರೀ ಗೋವಿಂದಾಯ ನಮಃ |’ ಈ ಹೆಸರನ್ನು ಹೇಳಿ ಕೈಯಲ್ಲಿ ನೀರು ತೆಗೆದುಕೊಂಡು ತಟ್ಟೆಯಲ್ಲಿ ಬಿಡಬೇಕು.

ನಂತರ ಮುಂದಿನ ಹೆಸರುಗಳನ್ನು ಅನುಕ್ರಮವಾಗಿ ಉಚ್ಚರಿಸಬೇಕು.

ವಿಷ್ಣವೇ ನಮಃ | ಮಧೂಸೂದನಾಯ ನಮಃ | ತ್ರಿವಿಕ್ರಮಾಯ ನಮಃ | ವಾಮನಾಯ ನಮಃ | ಶ್ರೀಧರಾಯ ನಮಃ | ಹೃಷಿಕೇಶಾಯ ನಮಃ | ಪದ್ಮನಾಭಾಯ ನಮಃ  | ದಾಮೋದರಾಯ ನಮಃ | ಸಂಕರ್ಷಣಾಯ ನಮಃ | ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ | ಅನಿರುದ್ಧಾಯ ನಮಃ | ಪುರುಷೋತ್ತಮಾಯ ನಮಃ | ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ | ಅಚ್ಯುತಾಯ ನಮಃ | ಜನಾರ್ದನಾಯ ನಮಃ | ಉಪೇಂದ್ರಾಯ ನಮಃ | ಹರಯೇ ನಮಃ | ಶ್ರೀ  ಕೃಷ್ಣಾಯ ನಮಃ |

(ನಮಸ್ಕಾರ ಮಾಡಬೇಕು)

ಪ್ರಾರ್ಥನೆ

ನಂತರ ಎರಡೂ ಕೈಗಳನ್ನು ಜೋಡಿಸಿ ಶಾಂತ ಮನಸ್ಸಿನಿಂದ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು.

ಶ್ರೀಮನ್ಮಹಾಗಣಾಧಿಪತಯೇ ನಮಃ | ಇಷ್ಟದೇವತಾಭ್ಯೋ ನಮಃ | ಕುಲದೇವತಾಭ್ಯೋ ನಮಃ | ಗ್ರಾಮದೇವತಾಭ್ಯೋ ನಮಃ | ಸ್ಥಾನದೇವತಾಭ್ಯೋ ನಮಃ| ವಾಸ್ತುದೇವತಾಭ್ಯೋ ನಮಃ | ಆದಿತ್ಯಾದಿ ನವಗ್ರಹದೇವತಾಭ್ಯೋ ನಮಃ | ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅವಿಘ್ನಮಸ್ತು |

ದೇಶಕಾಲ ಕಥನ
(31.10.2024)

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತ-ವಾರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಕಲಿ ಪ್ರಥಮ ಚರಣೇ ಜಂಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಾಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣತೀರೇ ಶಾಲಿವಾಹನ ಶಕೇ ಅಸ್ಮಿನ್ವರ್ತಮಾನೇ ವ್ಯಾವಹಾರಿಕೇ ಕ್ರೋಧೀ ನಾಮ ಸಂವತ್ಸರೇ, ದಕ್ಷಿಣಾಯನೇ, ಶರದಋತೌ, ಆಶ್ವಿನ ಮಾಸೇ, ಕೃಷ್ಣ ಪಕ್ಷೇ, ಅಮಾಯಾಂತಿಥೌ, ಬೃಹಸ್ಪತೀ ವಾಸರೇ, ಚಿತ್ರಾ ದಿವಸ ನಕ್ಷತ್ರೇ, ಪ್ರೀತಿ ಯೋಗೇ, ಚತುಷ್ಪಾದ ಕರಣೇ, ತುಲಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ತುಲಾ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ವೃಷಭ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್ಚರೇ, ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹಗುಣವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥೌ….

(1.11.2024)

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತ-ವಾರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಕಲಿ ಪ್ರಥಮ ಚರಣೇ ಜಂಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಾಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣತೀರೇ ಶಾಲಿವಾಹನ ಶಕೇ ಅಸ್ಮಿನ್ವರ್ತಮಾನೇ ವ್ಯಾವಹಾರಿಕೇ ಕ್ರೋಧೀ ನಾಮ ಸಂವತ್ಸರೇ, ದಕ್ಷಿಣಾಯನೇ, ಶರದಋತೌ, ಆಶ್ವಯುಜ ಮಾಸೇ, ಕೃಷ್ಣ ಪಕ್ಷೇ, ಅಮಾಯಾಂತಿಥೌ (೧೮.೧೭ ಪರ್ಯಂತ), ಶುಕ್ರ ವಾಸರೇ, ಸ್ವಾತೀ ದಿವಸ ನಕ್ಷತ್ರೇ, ಪ್ರೀತಿ (೧೦.೪೧ ನಂತರ ಆಯುಷ್ಮಾನ) ಯೋಗೇ, ನಾಗ ಕರಣೇ, ತುಲಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ತುಲಾ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ವೃಷಭ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್ಚರೇ, ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹಗುಣವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…..l

ಮೇಲೆ ನೀಡಿರುವ ದೇಶಕಾಲ ಹೇಳಲು ಕಷ್ಟವಾದರೆ ಮುಂದಿನ ಶ್ಲೋಕವನ್ನೂ ಹೇಳಬಹುದು

ತಿಥಿರ್ವಿಷ್ಣುಸ್ತಥಾ ವಾರಂ ನಕ್ಷತ್ರಂ ವಿಷ್ಣುರೇವ ಚ ।
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್ ।।

ಸಂಕಲ್ಪ

ಶ್ರೀ ಮಹಾಲಕ್ಷ್ಮೀಯ ಪ್ರೀತ್ಯರ್ಥವಾಗಿ ನನ್ನ/ನಮ್ಮ ದಾರಿದ್ರ್ಯವು ಪರಿಹಾರವಾಗಬೇಕು ಹಾಗೂ ಯಥೇಚ್ಛ ಲಕ್ಷ್ಮೀ ಪ್ರಾಪ್ತಿ ಮಂಗಳ ಐಶ್ವರ್ಯ, ಕುಲದ ಅಭಿವೃದ್ಧಿ ಸುಖ-ಸಮೃದ್ಧಿ ಇತ್ಯಾದಿ ಫಲಪ್ರಾಪ್ತಿಯಾಗಬೇಕು ಎಂದು ಲಕ್ಷ್ಮೀಪೂಜೆ ಹಾಗೂ ಕುಬೇರ ಪೂಜೆಯನ್ನು ಮಾಡುತ್ತೇನೆ.

ಧ್ಯಾನ

ಕರ್ಪೂರದ ಚೂರ್ಣದಂತೆ ಶುಭ್ರವಾಗಿರುವ ಶುಭ್ರವಸ್ತ್ರಗಳನ್ನು ಧರಿಸಿರುವ ಮುಕ್ತಾಭರಣಗಳಿಂದ ವಿಭೂಷಿತಳಾಗಿ ಕಮಲದಲ್ಲಿ ನಿವಾಸ ಮಾಡುವ ಸ್ಮಿತ ಮುಖಾರವಿಂದವಿರುವ ಶರದೃತುವಿನಲ್ಲಿನ ಚಂದ್ರಕಲೆಯಂತೆ ಸೌಂದರ್ಯವಿರುವ ಆರ್ದ್ರ ಕಣ್ಣುಗಳುಳ್ಳ ಚತುರ್ಭುಜಗಳಿರುವ ಅವಳು ಎರಡು ಕರಕಮಲಗಳಲ್ಲಿ ಕಮಲಗಳು ಮತ್ತು ಎರಡು ಕೈಗಳಲ್ಲಿ ಅಭಯ ಹಾಗೂ ವರಮುದ್ರೆಗಳನ್ನು ಧರಿಸಿರುವ ಮತ್ತು ಯಾರಿಗೆ ಎರಡು ಆನೆಗಳು ತಮ್ಮ ಸೊಂಡಿಲಿನಿಂದ ಎಲ್ಲಾ ಕಡೆಗಳಿಂದಲೂ ಅಭಿಷೇಕವನ್ನು ಮಾಡುತ್ತವೆಯೋ ಅಂತಹ ಮಹಾಲಕ್ಷ್ಮೀಯ ಧ್ಯಾನವನ್ನು ನಾನು ಮಾಡುತ್ತೇನೆ.

ಆವಾಹನೆ

ಹೇ ಮಹಾಲಕ್ಷ್ಮೀ, ಶ್ರೀ ಮಹಾವಿಷ್ಣುವಿನ ಚರಣಕಮಲಗಳಿಂದ ನೀನು ಇಲ್ಲಿ ಬಾ ಮತ್ತು ನಿನ್ನ ಸಲುವಾಗಿ ಮಾಡಿರುವ ಪೂಜೆಯನ್ನು ಸ್ವೀಕರಿಸು.

ಆಸನ

ಹೇ ಲಕ್ಷ್ಮೀ, ನೀನು ಕಮಲದಲ್ಲಿಯೇ ನಿವಾಸ ಮಾಡುತ್ತೀ, ಆಗ ನನ್ನ ಮೇಲೆ ಕೃಪೆಯನ್ನು ಮಾಡುವ ಸಲುವಾಗಿ ನೀನು ಈ ಕಮಲದಲ್ಲಿಯೇ ನಿವಾಸ ಮಾಡು.

ಪಾದ್ಯ

ಪ್ರವಾಸದ ಎಲ್ಲಾ ಶ್ರಮವು ದೂರವಾಗಬೇಕೆಂದು, ಕಾಲುಗಳನ್ನು ತೊಳೆಯುವ ಸಲುವಾಗಿ, ಗಂಗೋದಕ(ಗಂಗಾಜಲ)ದಿಂದ ಯುಕ್ತವಾದ ವಿವಿಧ ಮಂತ್ರಗಳಿಂದ ಅಭಿಮಂತ್ರಿತಗೊಳಿಸಿದ ನೀರನ್ನು ನೀಡುತ್ತಿದ್ದೇನೆ.

ಅರ್ಘ್ಯ

ಭಕ್ತರ ಮೇಲೆ ಉಪಕಾರವನ್ನು ಮಾಡುವ ಹೇ ಮಹಾಲಕ್ಷ್ಮೀ, ಪಾಪಗಳನ್ನು ನಾಶ ಮಾಡುವ ಮತ್ತು ಪುಣ್ಯಕಾರಕವಾದ ತೀರ್ಥದಿಂದ ಮಾಡಿದ ಈ ಅರ್ಘ್ಯವನ್ನು ಗ್ರಹಿಸು.

ಆಚಮನ

ಹೇ ಜಗದಂಬಿಕೆ, ಕರ್ಪೂರ, ಅಗರುಗಳಿಂದ ಮಿಶ್ರಿತ ಉತ್ತಮವಾದ ತಣ್ಣನೆಯ ನೀರನ್ನು ನೀನು ಆಚಮನ ಮಾಡುವ ಸಲುವಾಗಿ ಗ್ರಹಿಸು.

ಸ್ನಾನ

ಹೇ ಮಹಾಲಕ್ಷ್ಮೀ, ಕರ್ಪೂರ ಅಗರುಗಳಿಂದ ಸುವಾಸಿತವಾದ ಎಲ್ಲಾ ತೀರ್ಥಗಳಿಂದ ತಂದಿರುವ ನೀರನ್ನು ನೀನು ಸ್ನಾನದ ಸಲುವಾಗಿ ಗ್ರಹಿಸು.

ಪಂಚಾಮೃತ

ಹೇ ದೇವಿ, ನಾನು ನೀಡಿರುವ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯುಕ್ತ ಪಂಚಾಮೃತವನ್ನು ಸ್ನಾನದ ಸಲುವಾಗಿ ಗ್ರಹಿಸು.

ಅಭ್ಯಂಗ ಸ್ನಾನ

ನಾನು ಸಮರ್ಪಿಸಿರುವ ಸುಗಂಧಿತ ಉಟಣೆಯ ಜೊತೆಗೆ ಅರಶಿನದ ಪುಡಿ, ಅತ್ತರಿನಿಂದ ಕೂಡಿದ ಈ ಶುದ್ಧವಾದ ನೀರನ್ನು ಸ್ನಾನದ ಸಲುವಾಗಿ ಗ್ರಹಿಸು.

ಗಂಧೋದಕ ಸ್ನಾನ

ಕರ್ಪೂರ, ಏಲಕ್ಕಿಯಿಂದ ಯುಕ್ತವಾದ ಹಾಗೂ ಸುಗಂಧಿತ ದ್ರವ್ಯಗಳಿಂದ ಯುಕ್ತವಾದ ಈ ಗಂಧೋದಕವನ್ನು ಸ್ನಾನದ ಸಲುವಾಗಿ ಸ್ವೀಕರಿಸು.

ಮಹಾಭಿಷೇಕ

(ನಮ್ಮ ಅಧಿಕಾರಕ್ಕನುಸಾರವಾಗಿ ಶ್ರೀ ಸೂಕ್ತ/ಪೌರಾಣೋಕ್ತ ದೇವಿ ಸೂಕ್ತದಿಂದ ಅಭಿಷೇಕವನ್ನು ಮಾಡಬೇಕು.)

ವಸ್ತ್ರ

ತಂತುಗಳ ಸತತವಾಗಿ ತಂತುಮಯವಾಗಿರುವ ಹಾಗೂ ಕಲಾಕುಸುರಿಗಳಿಂದ ಕೂಡಿದ, ಶರೀರವನ್ನು ಅಲಂಕರಿಸುವ ಈ ಶ್ರೇಷ್ಠ ವಸ್ತ್ರವನ್ನು ಹೇ ದೇವಿ ನೀನು ಧರಿಸು.

ರವಿಕೆ ಖಣ

ಹೇ ವಿಷ್ಣುವಲ್ಲಭೇ, ಮುತ್ತಿನ ಮಣಿಗಳ ಸಮೂಹದಿಂದ ಕೂಡಿದ ಸುಖಕರವಾದ ಹಾಗೂ ಅತ್ಯಮೂಲ್ಯವಾದ ಈ ರವಿಕೆ ಖಣವನ್ನು ನಾನು ನಿನಗೆ ನೀಡುತ್ತಿದ್ದೇನೆ.

ಗಂಧ

ಮಲಯ ಪರ್ವತದ ಮೇಲೆ ಸಿದ್ಧವಾದ, ಅನೇಕ ನಾಗಗಳಿಂದ ರಕ್ಷಣೆ ಮಾಡಲ್ಪಟ್ಟ ಅತ್ಯಂತ ಶೀತಲವಾದ ಈ ಚಂದನವನ್ನು ಸ್ವೀಕರಿಸು.

ಅರಿಶಿನ ಕುಂಕುಮ

ಹೇ ಈಶ್ವರೀ, ನಾನು ತಟ್ಟೆಯಲ್ಲಿನ ಅರಿಶಿನ ಕುಂಕುಮ, ಅ೦ಜನ, ಸಿಂಧೂರ ಆದಿ ಸೌಭಾಗ್ಯ ದ್ರವ್ಯಗಳನ್ನು ನೀಡುತ್ತಿದ್ದೇನೆ, ಸ್ವೀಕರಿಸು.

ಅಲಂಕಾರ

ಹೇ ದೇವಿ, ರತ್ನಗಳಿಂದ ಕೂಡಿದ ಕಂಕಣಗಳು(ಬಳೆಗಳು), ತೋಳುಪಟ್ಟಿ, ಸೊಂಟದ ಡಾಬು, ಕರ್ಣಾಭರಣಗಳು, ಗೆಜ್ಜೆ, ಮುತ್ತಿನ ಹಾರ, ಮುಕುಟ ಇತ್ಯಾದಿ ಅಲಂಕಾರಗಳನ್ನು ನೀನು ಧರಿಸು.

ಪುಷ್ಪ

ಹೇ ಲಕ್ಷ್ಮೀ, ಪ್ರಾಪ್ತವಾಗಿರುವ ಸುಗಂಧದಿಂದ ಆನಂದಿತ ಹಾಗೂ ಉನ್ಮತ್ತ ಭ್ರಮರಗಳ ಸಮೂಹಗಳಿಂದ ವ್ಯಾಪಿಸಿರುವ ನಂದನವನದಲ್ಲಿನ ಹೂವುಗಳ ಗೊಂಚಲನ್ನು ನೀನು ಸ್ವೀಕರಿಸು.

ಅಥಾಂಗ ಪೂಜೆ

(ದೇವಿಯ ಚರಣಕಮಲಗಳಿಂದ ಮಸ್ತಕದವರೆಗಿನ ಎಲ್ಲ ಅವಯವಗಳ ಪೂಜೆಯನ್ನು ಮಾಡುವುದು, ‘ಪೂಜಯಾಮಿ’ ಹೇಳುವಾಗ ಅಕ್ಷತೆಯನ್ನು ಅರ್ಪಿಸಬೇಕು)

೧. ಶ್ರಿಯೈ ನಮಃ ಪಾದೌಪೂಜಯಾಮಿ |
೨. ಲಕ್ಷ್ಮ್ಯೈ ನಮಃ ಜಾನುನೀಪೂಜಯಾಮಿ |
೩. ಪದ್ಮಾಯೈ ನಮಃ ಊರೂಪೂಜಯಾಮಿ |
೪. ಧಾತ್ರ್ಯೈ ನಮಃ ಕಟಿಂಪೂಜಯಾಮಿ |
೫. ರಮಾಯೈ ನಮಃ ಉದರಂಪೂಜಯಾಮಿ |
೬. ವರದಾಯೈ ನಮಃ ಸ್ತನೌಪೂಜಯಾಮಿ |
೭. ಲೋಕಮಾತ್ರೇ ನಮಃ ಕಂಠಂಪೂಜಯಾಮಿ |
೮. ಚತುರ್ಭುಜಾಯೈ ನಮಃ ಬಾಹೂಪೂಜಯಾಮಿ |
೯. ಋದ್ಧ್ಯೈ ನಮಃ ಮುಖಂಪೂಜಯಾಮಿ |
೧೦. ಸಿದ್ದ್ಯೈ ನಮಃ ನಾಸಿಕಾಂಪೂಜಯಾಮಿ |
೧೧. ಪುಷ್ಟ್ಯೈ ನಮಃ ನೇತ್ರೇಪೂಜಯಾಮಿ |
೧೨. ತುಷ್ಟೈ ನಮಃ ಲಲಾಟಪೂಜಯಾಮಿಂ |
೧೩. ಇಂದಿರಾಯೈ ನಮಃ ಶಿರಃಪೂಜಯಾಮಿ |
೧೪. ಸರ್ವೇಶ್ವರ್ಯೈ ನಮಃ ಸರ್ವಾಂಗಂಪೂಜಯಾಮಿ ||

ಅಥ: ಪತ್ರಪೂಜೆ
(ದೇವಿಗೆ ಕೆಳಗಿನ ಗಿಡಗಳ ಪತ್ರೆಗಳನ್ನು ಅರ್ಪಿಸಬೇಕು)
೧. ಶ್ರಿಯೈ ನಮಃ | ಪದ್ಮಪತ್ರಂ ಸಮರ್ಪಯಾಮಿ |
೨. ಲಕ್ಷ್ಮ್ಯೈ ನಮಃ | ದೂರ್ವಾಪತ್ರಂ ಸಮರ್ಪಯಾಮಿ |
೩. ಪದ್ಮಾಯೈ ನಮಃ | ತುಲಸೀಪತ್ರಂ ಸಮರ್ಪಯಾಮಿ |
೪. ಧಾತ್ರ್ಯೈ ನಮಃ | ಬಿಲ್ವಪತ್ರಂ ಸಮರ್ಪಯಾಮಿ |
೫. ರಮಾಯೈ ನಮಃ | ಚಂಪಕಪತ್ರಂ ಸಮರ್ಪಯಾಮಿ |
೬. ವರದಾಯೈ ನಮಃ | ಬಕುಲಪತ್ರಂ ಸಮರ್ಪಯಾಮಿ |
೭. ಲೋಕಮಾತ್ರೇ ನಮ: | ಮಾಲತೀಪತ್ರಂ ಸಮರ್ಪಯಾಮಿ |
೮. ಚತುರ್ಭುಜಾಯೈ ನಮಃ | ಜಾತೀಪತ್ರಂ ಸಮರ್ಪಯಾಮಿ |
೯. ಋದ್ಧ್ಯೈ ನಮಃ | ಆಮ್ರಪತ್ರಂ ಸಮರ್ಪಯಾಮಿ |
೧೦. ಸಿದ್ದ್ಯೈ ನಮಃ | ಮಲ್ಲಿಕಾಪತ್ರಂ ಸಮರ್ಪಯಾಮಿ |
೧೧. ಪುಷ್ಟ್ಯೈ ನಮಃ | ಅಪಾಮಾರ್ಗಪತ್ರಂ ಸಮರ್ಪಯಾಮಿ |
೧೨. ತುಷ್ಟೈ ನಮಃ | ಅಶೋಕಪತ್ರಂ ಸಮರ್ಪಯಾಮಿ |
೧೩. ಇಂದಿರಾಯೈ ನಮಃ | ಕರವೀರಪತ್ರಂ ಸಮರ್ಪಯಾಮಿ |
೧೪. ಹರಿಪ್ರಿಯಾಯೈ ನಮಃ | ಬದರೀಪತ್ರಂ ಸಮರ್ಪಯಾಮಿ |
೧೫. ಭೂತ್ಯೈ ನಮಃ | ದಾಡಿಮೀಪತ್ರಂ ಸಮರ್ಪಯಾಮಿ |
೧೬. ಈಶ್ವರ್ಯೈ ನಮಃ | ಅಗಸ್ತಿಪತ್ರಂ ಸಮರ್ಪಯಾಮಿ |

ಧೂಪ

ಹೇ ದೇವಿ, ಅನೇಕ ಗಿಡ ಮೂಲಿಕೆಗಳ ರಸಗಳಿಂದ ಉತ್ಪನ್ನವಾದ ಸುಗಂಧಿತ ಗಂಧಗಳಿಂದ ಯುಕ್ತವಾದ, ಯಾವುದು ದೇವತೆ  ದೈತ್ಯ ಮತ್ತು ಮಾನವರಿಗೂ ಆನಂದಕಾರಕವಾಗಿದೆಯೋ, ಅಂತಹ ಧೂಪವನ್ನು ನೀನು ಗ್ರಹಿಸು.

ದೀಪ

ಸೂರ್ಯಮಂಡಲ, ಅಖಂಡ ಚಂದ್ರಬಿಂಬ ಮತ್ತು ಅಗ್ನಿ ಇವುಗಳ ತೇಜಸ್ಸಿಗೆ ಕಾರಣೀಭೂತವಾಗಿರುವ ದೀಪವನ್ನು ನಾನು ಭಕ್ತಿಯಿಂದ ನಿನಗೆ ಅರ್ಪಿಸುತ್ತಿದ್ದೇನೆ.

ನೈವೇದ್ಯ

ಲವಂಗ, ಏಲಕ್ಕಿ, ಸಕ್ಕರೆಯನ್ನು ಹಾಕಿದ ಹಾಲು ಹಾಗೆಯೇ ಲಾಡುವಿನ ನೈವೇದ್ಯವನ್ನು ತೋರಿಸಬೇಕು. ಸ್ವರ್ಗ, ಪಾತಾಳ ಮತ್ತು ಮೃತ್ಯುಲೋಕಗಳಿಗೆ ಆಧಾರವಾಗಿರುವ ಧಾನ್ಯ ಹಾಗೂ ಅವುಗಳಿಂದ ಸಿದ್ಧಪಡಿಸಿದ ಹದಿನಾರು ಆಕಾರಗಳ ನೈವೇದ್ಯವನ್ನು ನಾವು ಸ್ವೀಕರಿಸಬೇಕು.

ಫಲ

ಹೇ ದೇವಿ, ಈ ಫಲವನ್ನು ನಾನು ನಿನಗೆ ಸಮರ್ಪಿಸಲು ಇಡುತ್ತಿದ್ದೇನೆ, ಅದರಿಂದಾಗಿ ಪ್ರತೀ ಜನ್ಮದಲ್ಲೂ ನನಗೆ ಒಳ್ಳೆಯ ಫಲಗಳೇ ಪ್ರಾಪ್ತಿಯಾಗಲಿ; ಕಾರಣ ಈ ಚರಾಚರ ತ್ರಿಲೋಕದಲ್ಲಿ ಫಲದಿಂದಾಗಿಯೇ ಫಲಪ್ರಾಪ್ತಿ ಫಲಪ್ರದಾನದಿಂದಾಗಿಯೇ ನನ್ನ ಮನೋರಥವು ಪೂರ್ಣವಾಗಲಿ.

ತಾಂಬೂಲ (ಎಲೆ-ಅಡಿಕೆ)

ಹೇ ದೇವಿ, ಮುಖಾರವಿಂದಕ್ಕೆ ಭೂಷಣವಾಗಿರುವ, ಅನೇಕ ಗುಣಗಳಿಂದ ಕೂಡಿರುವ, ಯಾವುದರ ಉತ್ಪತ್ತಿಯು ಪಾತಾಳದಲ್ಲಿ ಆಯಿತೋ, ನನ್ನಿಂದ ಕೊಡಲಾಗುವ ಅಂತಹ ತಾಂಬೂಲವನ್ನು ನೀನು ಸ್ವೀಕರಿಸು.

ಆರತಿ

ಚಂದ್ರ, ಸೂರ್ಯ, ಪೃಥ್ವಿ, ಮಿಂಚು, ಅಗ್ನಿಯಲ್ಲಿರುವ ತೇಜವು ನೀನೇ ಆಗಿರುವೆ. (ದೇವಿಯ ಆರತಿ ಹಾಡಬೇಕು ನಂತರ ಕರ್ಪೂರ ಆರತಿ ಬೆಳಗಬೇಕು.)

ಕರ್ಪೂರ

ಕರ್ಪೂರದಂತೆ ಬೆಳ್ಳಗಾಗಿರುವ, ಕರುಣಾರಸದ ಅವತಾರವಾಗಿರುವ, ತ್ರೈಲೋಕ್ಯದ ಸಾರವಾಗಿರುವ ಯಾರು ನಾಗರಾಜನನ್ನು ತನ್ನ ಕಂಠಾಹಾರವನ್ನಾಗಿಸಿದ್ದಾನೆಯೇ, ಯಾರು ಸರ್ವಕಾಲದಲ್ಲಿಯೇ ಹೃದಯ ಕಮಲದಲ್ಲಿ ನಿರಂತರವಾಗಿ ವಾಸ ಮಾಡಿಕೊಂಡಿದ್ದಾನೆಯೇ, ಅಂತಹ ಪಾರ್ವತಿಯ ಸಮೇತವಾಗಿರುವ ಶಂಕರನಿಗೆ, ನಾನು ನಮಸ್ಕಾರವನ್ನು ಮಾಡುತ್ತೇನೆ.

ನಮಸ್ಕಾರ

ಇಂದ್ರಾದಿ ದೇವತೆಗಳ ಶಕ್ತಿಯಿರುವ, ಅದೇ ರೀತಿ ಮಹಾದೇವ, ಮಹಾವಿಷ್ಣು, ಬ್ರಹ್ಮದೇವರ ಶಕ್ತಿ ಇರುವ, ಮಂಗಳರೂಪವಿರುವ, ಸುಖವನ್ನು ನೀಡುವ ಅಂತಹ ಈ ಮೂಲ ಪ್ರಕೃತಿರೂಪವಿರುವ ದೇವಿ, ನಿನಗೆ ನಾವೆಲ್ಲರೂ ನಮ್ರರಾಗಿ ಸತತವಾಗಿ ನಮಸ್ಕಾರವನ್ನು ಮಾಡುತ್ತೇನೆ.

ಪ್ರದಕ್ಷಿಣೆ

ನಾನು ಯಾವ್ಯಾವುದೋ ಪಾತಕಗಳನ್ನು ಈ ಜನ್ಮದಲ್ಲಿ ಅಥವಾ ಬೇರೆ ಜನ್ಮಗಳಲ್ಲಿ ಮಾಡಿದ್ದಿದ್ದರೆ, ಆ ಎಲ್ಲ ಪಾತಕಗಳು ಪ್ರದಕ್ಷಿಣೆಯ ಪ್ರತಿ ಹೆಜ್ಜೆ-ಹೆಜ್ಜೆಯಲ್ಲಿಯೇ ನಷ್ಟವಾಗಲಿ. ನೀನೇ ನನಗೆ ಆಶ್ರಯವಾಗಿದ್ದೀ. ನಿನ್ನನ್ನು ಬಿಟ್ಟು ನನ್ನ ರಕ್ಷಣೆ ಮಾಡುವವರು ಬೇರೆ ಯಾರೂ ಇಲ್ಲ;  ಹೇ ಜಗದಂಬೇ, ಕರುಣಭಾವದಿಂದ ನೀನು ನನ್ನ ರಕ್ಷಣೆಯನ್ನು ಮಾಡು.

ಪುಷ್ಪಾಂಜಲಿ

ಹೇ ಲಕ್ಷ್ಮೀ, ನೀನು ವಿಷ್ಣುವಿನ ಧರ್ಮಪತ್ನಿಯಾಗಿದ್ದೀ, ಈ ಪುಷ್ಪಾಂಜಲಿಯನ್ನು ಸ್ವೀಕರಿಸು ಮತ್ತು ಈ ಪೂಜೆಯ ಯಥಾಯೋಗ್ಯವಾದ ಫಲವನ್ನು ನೀನು ಪ್ರಾಪ್ತಿ ಮಾಡಿಕೊಡು.

ಪ್ರಾರ್ಥನೆ

ಹೇ ವಿಷ್ಣುಪ್ರಿಯೇ, ನೀನು ವರವನ್ನು ಕೊಡುವವಳಾಗಿದ್ದೀ, ನಾನು ನಿನಗೆ ನಮಸ್ಕಾರವನ್ನು ಮಾಡುತ್ತೇನೆ. ನಿನಗೆ ಶರಣು ಬಂದವರಿಗೆ ಯಾವ ಗತಿ ಪ್ರಾಪ್ತವಾಗುತ್ತದೆಯೇ, ಅದೇ ಗತಿಯು ನಿನ್ನ ಪೂಜೆ ಮಾಡುವುದರಿಂದ ನನಗೆ ಪ್ರಾಪ್ತವಾಗಲಿ. ಯಾವ ಲಕ್ಷ್ಮೀ ದೇವಿಯು (ತೇಜದ ಸೌಂದರ್ಯದ) ರೂಪದಿಂದ ಎಲ್ಲ ಭೂತಗಳಲ್ಲಿ ನಿವಾಸ ಮಾಡುತ್ತಾಳೆ, ಅವಳನ್ನು ನಾನು ತ್ರಿಕಾಲ (ಮೂರು ವೇಳೆ) ನಮಸ್ಕಾರವನ್ನು ಮಾಡುತ್ತೇನೆ. ಸಂಪತ್ತಿನ ರಾಶಿಯ ಅಧಿಪತಿಯಾದ ಹೇ ಕುಬೇರ, ನಿನಗೆ ನಾನು ನಮಸ್ಕಾರವನ್ನು ಮಾಡುತ್ತೇನೆ. ನಿನ್ನ ಪ್ರಸನ್ನತೆಯಿಂದ ನನಗೆ ಧನ-ಧಾನ್ಯ ಸಂಪತ್ತಿನ ಪ್ರಾಪ್ತಿಯಾಗಲಿ.

ಲಕ್ಷ್ಮೀಪೂಜೆಯ ಸಮಯದಲ್ಲಿ ಸಂಪೂರ್ಣ ವರ್ಷದ ಆದಾಯ-ಖರ್ಚಿನ ಲೆಕ್ಕಾಚಾರದ ಪುಸ್ತಕವನ್ನು ಲಕ್ಷ್ಮೀಯ ಮುಂದಿಟ್ಟು ಶ್ರೀ ಲಕ್ಷ್ಮೀದೇವಿಗೆ ಯಾವ ಪ್ರಾರ್ಥನೆಯನ್ನು ಮಾಡಬೇಕು ಎಂದು ತಿಳಿದುಕೊಳ್ಳಲು, ಕ್ಲಿಕ್ ಮಾಡಿ !

‘ಅನೇನ ಕೃತ ಪೂಜನೇನ ಶ್ರೀ ಲಕ್ಷ್ಮೀದೇವಿ ಪ್ರಿಯತಾಂ’ ಎಂದು ಹೇಳುತ್ತಾ ಕೈಗಳಲ್ಲಿ ಅಕ್ಷತೆಯನ್ನು ಹಿಡಿದುಕೊಂಡು ಅದರ ಮೇಲೆ ನೀರನ್ನು ಹಾಕಿ ತಟ್ಟೆಯಲ್ಲಿ ಬಿಡಬೇಕು ಮತ್ತು ಎರಡು ಬಾರಿ ಅಚಮನ ಮಾಡಬೇಕು.

ಸತ್ಕಾರ್ಯಕ್ಕೆ ಧನ ಅರ್ಪಣೆ

ಸತ್ಕಾರ್ಯಕ್ಕೆ ಧನ ಅರ್ಪಣೆ ಮಾಡುವುದು, ಇದೇ ನಿಜವಾದ ಲಕ್ಷ್ಮೀ ಪೂಜೆಯಾಗಿದೆ. ಧರ್ಮಶಾಸ್ತ್ರಕ್ಕನುಸಾರ ‘ಮನುಷ್ಯನು ತಾನು ಗಳಿಸಿದ ೧/೬ ಪಾಲು ಈಶ್ವರನ ಕಾರ್ಯಕ್ಕಾಗಿ ವಿನಿಯೋಗಿಸಬೇಕು’, ಎಂದು ಹೇಳಲಾಗುತ್ತದೆ. ಧನದ ವಿನಿಯೋಗವು ಸತ್ಕಾರ್ಯಕ್ಕಾಗಿ ಆಗುವುದರಿಂದ ಧನಲಕ್ಷ್ಮೀಯು ಲಕ್ಷ್ಮೀರೂಪದಿಂದ ಸದಾಕಾಲ ಜೊತೆಗೆ ಇರುವಳು ! ಸದ್ಯ ಧರ್ಮದ ಸ್ಥಿತಿ ಹದಗೆಟ್ಟಿದೆ. ಆದುದರಿಂದ ಧರ್ಮದ ಪುನರ್ ಸ್ಥಾಪನೆಯ ಕಾರ್ಯ ಮಾಡುವುದು ಪ್ರಸ್ತುತ ಕಾಲದ ಈಶ್ವರನ ಕಾರ್ಯವಾಗಿದ್ದು ಅದಕ್ಕೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಕಳೆದ ಅನೇಕ ವರ್ಷಗಳಿಂದ ಸನಾತನ ಸಂಸ್ಥೆಯು ಧರ್ಮಜಾಗೃತಿಯ ಕಾರ್ಯವನ್ನು ನಿರಪೇಕ್ಷವಾಗಿ ಮಾಡುತ್ತಿದೆ. ಆದ್ದರಿಂದ ಅರ್ಪಣೆದಾರರು ಸನಾತನ ಸಂಸ್ಥೆಗೆ ಮಾಡಿದ ದಾನದ(ಅರ್ಪಣೆಯ) ಉಪಯೋಗವು ಧರ್ಮದ ಪುನರ್‌ಸ್ಥಾಪನೆಗಾಗಿಯೇ ಆಗುತ್ತದೆ, ಎಂಬುದು ಖಚಿತವಾಗಿದೆ !

ಅಲಕ್ಷ್ಮೀಯ ನಿರ್ಮೂಲನ

ಮಹತ್ವ

ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ.

ಕೃತಿ

‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.

Leave a Comment