ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ಹಿಂದಿರುವ ಸತ್ಯ ಮತ್ತು ವಿಪರ್ಯಾಸ !

‘ಯಾವುದೇ ದೇವಸ್ಥಾನದಲ್ಲಿ ಯಾವುದಾದರೂ ಪರಂಪರೆ ಸಂಪ್ರದಾಯ ಮುರಿಯುವುದರ ಹಿಂದಿರುವ ಇತಿಹಾಸವೇನೆಂದು ತಿಳಿದುಕೊಳ್ಳಬೇಕು. ಶಬರಿಮಲೆ ದೇವಸ್ಥಾನವನ್ನು ನಿರ್ಮಿಸುವಾಗ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರ ಹಿಂದಿರುವ ಶಾಸ್ತ್ರವನ್ನು ಅರಿತುಕೊಳ್ಳಬೇಕು. ಪ್ರಗತಿಪರರು ಇದನ್ನು ತಿಳಿದುಕೊಳ್ಳದೆ ಸ್ತ್ರೀಯರ ಮೇಲೆ ಅನ್ಯಾಯವಾಗುತ್ತಿದೆ ಎಂಬಂತೆ ಮಾತನಾಡುತ್ತಿದ್ದಾರೆ. ಮುಸ್ಲಿಂ ಪಂಥದವರೂ ‘ಶಬರಿಮಲೆಯಲ್ಲಿ ಸ್ತ್ರೀಯರ ಪ್ರವೇಶವನ್ನು ನಿಷೇಧಿಸಿ, ಅವರನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಭಾರತದಲ್ಲಿ ಸಾಧಾರಣವಾಗಿ ೨೫ ಲಕ್ಷ ದೇವಸ್ಥಾನಗಳಿವೆ. ಈ ಎಲ್ಲ ದೇವಸ್ಥಾನಗಳಲ್ಲಿ ಎಲ್ಲರಿಗೆ ಮುಕ್ತಾವಕಾಶವಿದೆ. ಕೇವಲ ೪-೫ ದೇವಸ್ಥಾನಗಳಲ್ಲಿ ಮಾತ್ರ ಸ್ತ್ರೀಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಇನ್ನೂ ೪-೫ ದೇವಸ್ಥಾನಗಳಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸುವಂತಹದ್ದೂ ಇದೆ. ಇಲ್ಲಿ ಸ್ತ್ರೀ-ಪುರುಷ ಎನ್ನುವ ಭೇದಭಾವವಿಲ್ಲದೇ ಆ ದೇವತೆಗಳ ಮತ್ತು ಆಯಾ ದೇವಸ್ಥಾನಗಳಲ್ಲಿ ಆ ರೀತಿಯ ಉಪಾಸನೆಯ ಪದ್ಧತಿಯಿರುತ್ತದೆ. ಈ ಉಪಾಸನೆಯ ಪದ್ಧತಿಯು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರ ಹಿಂದಿರುವ ಶಾಸ್ತ್ರವೇನೆಂದು ತಿಳಿದುಕೊಳ್ಳಬೇಕು. ಕೇರಳ ರಾಜ್ಯದಲ್ಲಿ ಸ್ವಾಮಿ ಅಯ್ಯಪ್ಪನ ಅನೇಕ ದೇವಸ್ಥಾನಗಳಿವೆ; ಆದರೆ ಅವುಗಳಲ್ಲಿ ಯಾವುದೇ ದೇವಸ್ಥಾನದಲ್ಲಿ ಸ್ತ್ರೀಯರಿಗೆ ಪ್ರವೇಶವನ್ನು ನಿಷೇಧಿಸಿಲ್ಲ. ಹೀಗಿರುವಾಗ ಇದೇ ದೇವಸ್ಥಾನದಲ್ಲಿ ಏಕೆ ? ಎನ್ನುವುದರ ಕಾರಣವನ್ನು ತಿಳಿದುಕೊಳ್ಳಬೇಕು.

೧. ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಹತ್ತಿಕ್ಕುವ ನಾಸ್ತಿಕರು !

ಶಬರಿಮಲೆಯಲ್ಲಿ ಸ್ವಾಮಿ ಅಯ್ಯಪ್ಪನ ಬ್ರಹ್ಮಚಾರಿ ರೂಪವಿದೆ. ಇದರ ಹಿಂದೆ ಒಂದು ಕಥೆಯಿದೆ. ಸ್ವಾಮಿ ಅಯ್ಯಪ್ಪ ‘ಮಹಿಷಿ ಹೆಸರಿನ ಸ್ತ್ರೀ ರಾಕ್ಷಸಿಯೊಂದಿಗೆ ಯುದ್ಧ ಮಾಡಿ ಅವಳ ನಾಶ ಮಾಡಿದ ಸಂದರ್ಭದಲ್ಲಿ, ‘ಮಹಿಷಿಗೆ ಅವಳ ಪೂರ್ವಜನ್ಮದ ಶಾಪದಿಂದ ಮುಕ್ತಿ ದೊರೆತು ಅವಳಿಂದ ಒಂದು ಸುಂದರ ಮತ್ತು ದಿವ್ಯ ದೇವಿ ಪ್ರಕಟವಾಗುತ್ತಾಳೆ. ಈ ದೇವಿಯು ಸ್ವಾಮಿ ಅಯ್ಯಪ್ಪನನ್ನು ಪತಿಯ ರೂಪದಲ್ಲಿ ಸ್ವೀಕರಿಸಲು ಇಚ್ಛಿಸುತ್ತಾಳೆ. ಆಗ ಮೂಲದಲ್ಲಿಯೇ ಬ್ರಹ್ಮಚಾರಿಯಾಗಿರುವ ಸ್ವಾಮಿ ಅಯ್ಯಪ್ಪ ಅವಳಿಗೆ ನನ್ನ ಭಕ್ತರು ನನ್ನ ದಾರಿ ಕಾಯುತ್ತಿದ್ದಾರೆ. ಯಾವಾಗ ನನ್ನ ಭಕ್ತರು ಶಬರಿಮಲೆಗೆ ಬರುವುದನ್ನು ನಿಲ್ಲಿಸುತ್ತಾರೆಯೋ, ಆಗ ನಾನು ನಿನ್ನನ್ನು ವಿವಾಹವಾಗುತ್ತೇನೆ ಎಂದು ವಚನ ನೀಡುತ್ತಾನೆ. ಈ ದೇವಿಯ ದೇವಸ್ಥಾನ ಶಬರಿಮಲೆಯ ಮುಖ್ಯ ದೇವಸ್ಥಾನದ ಪಕ್ಕದಲ್ಲಿದೆ. ಅಲ್ಲಿ ‘ಮಲಿಕಾಪುರಾಥಮಾ ಹೆಸರಿನಿಂದ ಈ ದೇವಿಯ ಪೂಜೆ ನಡೆಯುತ್ತದೆ. ಈ ದೇವಿ ಅಯ್ಯಪ್ಪ ದೇವಸ್ಥಾನದ ಹೊರಗೆ ಕಳೆದ ಎಷ್ಟೋ ಯುಗಗಳಿಂದ ದಾರಿಕಾಯುತ್ತಿದ್ದಾಳೆ. ಅವಳು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರವೇಶಿಸುವುದಿಲ್ಲ. ಅವಳ ಈ ಪ್ರೇಮವನ್ನು ಗೌರವಿಸುವುದಕ್ಕಾಗಿ ಇತರ ಸ್ತ್ರೀಯರೂ ಈ ದೇವಸ್ಥಾನದಲ್ಲಿ ಪ್ರವೇಶಿಸುವುದಿಲ್ಲ. ‘ಶ್ರೀ ಅಯ್ಯಪ್ಪ ಸ್ವಾಮಿ ಕೂಡ ತನ್ನ ಭಕ್ತರಿಗೆ ಸಮಯ ನೀಡಲು ಮತ್ತು ಅವರ ಕಲ್ಯಾಣಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುತ್ತಾನೆ, ಎನ್ನುವುದು ಭಕ್ತರ ಶ್ರದ್ಧೆಯಾಗಿದೆ; ಆದರೆ ದೇವರ ಮೇಲೆ ಶ್ರದ್ಧೆಯೇ ಇಲ್ಲದ ನಾಸ್ತಿಕರು ‘ಸ್ತ್ರೀಯರ ಮೇಲೆ ಅನ್ಯಾಯವಾಗುತ್ತಿದೆ, ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ದೇವತೆಗಳ ಅಸ್ತಿತ್ವವನ್ನೇ ಒಪ್ಪಿಕೊಳ್ಳದವರಿಗೆ ದೇವರ ಮತ್ತು ಅದರ ಹಿಂದಿರುವ ಕಥೆಗಳ ಮೇಲೆ ವಿಶ್ವಾಸವಾದರೂ ಇರಬಲ್ಲದೇ ?

೨. ಅಧ್ಯಯನವನ್ನೇ ಮಾಡದೇ ಪರಂಪರೆಯನ್ನು ಭಗ್ನಗೊಳಿಸುವುದು ಅತ್ಯಂತ ಖೇದಕರ

ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮನವಿಯನ್ನು ದಾಖಲಿಸಿದ ನೌಷಾದ್ ಅಹಮ್ಮದ್ ಖಾನ್ ಮುಸಲ್ಮಾನ ಪಂಥದವನಾಗಿದ್ದಾನೆ. ಇದನ್ನು ಗಮನಿಸಿದಾಗ, ಇದು ಕೇವಲ ಹಿಂದೂಗಳ ಆಚರಣೆಗಳನ್ನು ನಾಶಗೊಳಿಸುವ ಷಡ್ಯಂತ್ರ್ಯವಾಗಿದೆ. ಇಂದು ದೆಹಲಿಯ ಜಾಮಾ ಮಸೀದಿಯಲ್ಲಿ ಸ್ತ್ರೀಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಹೀಗಿರುವಾಗ ಖಾನ್ ಇವರು ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಏಕೆ ಹೋಗುವುದಿಲ್ಲ ? ಇದರ ಕಾರಣ, ಮುಸಲ್ಮಾನರು ತಮ್ಮ ಧರ್ಮವನ್ನು ನಂಬುತ್ತಾರೆ. ಅವರಿಗೆ ಅವರ ಧಾರ್ಮಿಕ ಸ್ವಾತಂತ್ರ್ಯವಿದೆಯಲ್ಲ ! ಹಾಗಾದರೆ ಹಿಂದೂಗಳು ಇದರ ಬಗ್ಗೆ ವಿಚಾರ ಮಾಡುವ ಅವಶ್ಯಕತೆಯಿದೆ. ನಿಜ ಹೇಳಬೇಕೆಂದರೆ ಶಬರಿಮಲೆ ದೇವಸ್ಥಾನದ ಉತ್ಪತ್ತಿ, ಅಲ್ಲಿಯ ದೇವತೆಗಳ ಉತ್ಪತ್ತಿ, ಕಾರ್ಯ ಮತ್ತು ಉಪಾಸನೆಯ ಪದ್ಧತಿಯ ಹಿಂದಿರುವ ಶಾಸ್ತ್ರ, ಇವುಗಳನ್ನು ಅಧ್ಯಯನ ಮಾಡುವ ಅವಶ್ಯಕತೆಯಿದೆ. ಶಾಸ್ತ್ರವನ್ನು ತಿಳಿದುಕೊಳ್ಳದೆಯೇ ಆ ಕುರಿತು ಎಲ್ಲ ಮಟ್ಟದಲ್ಲಿಯೂ ಚರ್ಚಿಸುವುದೆಂದರೆ ವಕಾಲತ್ತಿನಲ್ಲಿ ನುರಿತವನು ಹೃದಯದ ಶಸ್ತ್ರಚಿಕಿತ್ಸೆ ಮಾಡಿದಂತಾಗುವುದಿಲ್ಲವೇ ? ಇದೇ ಆಧಾರದಲ್ಲಿ ಕಾನೂನಿನ ಆಧಾರದಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಿರುವ ಪರಂಪರೆಯನ್ನು ಮುರಿದಿರುವುದು ಖೇದಕರವಾಗಿದೆ.

೩. ಸಂಪೂರ್ಣ ವಿಶ್ವದ ಉತ್ಪತ್ತಿ ಮಾಡುವ ಪರಮೇಶ್ವರನನ್ನು ಯಾವ ಸಂವಿಧಾನದಲ್ಲಿ ಬಂಧಿಸುವಿರಿ ?

ಭಾರತೀಯ ಸಂವಿಧಾನದಲ್ಲಿ ಪ್ರತಿಯೊಂದು ಧರ್ಮಕ್ಕೆ ಅದರ ಆಚರಣೆ ಮತ್ತು ಪರಂಪರೆಯನ್ನು ಕಾಪಾಡುವ ಅಧಿಕಾರವನ್ನು ನೀಡಲಾಗಿದೆ. ಈ ಕಾರಣದಿಂದ ದೇವಸ್ಥಾನಗಳ ನಿಯಮಗಳನ್ನು ಕಾಪಾಡ ಬೇಕಾಗುತ್ತದೆ. ಒಂದು ವೇಳೆ ನೀವು ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುವವರಾಗಿದ್ದರೆ, ದೇವರಿಗೆ ಪ್ರತಿಯೊಂದು ಧರ್ಮದಲ್ಲಿಯೂ ಮೊದಲ ಸ್ಥಾನವನ್ನು ನೀಡಲಾಗಿದೆ. ‘ದೇವರೆಂದರೆ ಎಲ್ಲ ಸೃಷ್ಟಿಯ ಮೇಲೆ ನಿಯಂತ್ರಣವಿರುವ ಒಂದು ಸರ್ವೋಚ್ಚ ಶಕ್ತಿ, ಎಂದು ಪರಿಗಣಿಸಲ್ಪಟ್ಟಿದೆ. ದೇವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯೆಂದು ತಿಳಿಯುವುದು ತಪ್ಪಾಗಿದೆ.ಸಂಪೂರ್ಣ ವಿಶ್ವದ ಉತ್ಪತ್ತಿ ಮಾಡುವ ಪರಮೇಶ್ವರನನ್ನು ನಾವು ಯಾವುದೇ ಸಂವಿಧಾನದ ಬಂಧನದಲ್ಲಿಡಲು ಸಾಧ್ಯವಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಗೂ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಒಬ್ಬ ಬ್ರಹ್ಮಚಾರಿಯು ಯಾರನ್ನು ಭೇಟಿಯಾಗಬೇಕು ಮತ್ತು ಯಾರನ್ನು ಭೇಟಿಯಾಗಬಾರದು ಎನ್ನುವುದು ಅವನ ವೈಯಕ್ತಿಕ ಪ್ರಶ್ನೆಯಾಗಿರುತ್ತದೆ. ಅದು ಅವನ ಸ್ವಾತಂತ್ರ್ಯವಾಗಿದೆ. ಹೀಗಿರುವಾಗ ಒಂದು ದೇವಸ್ಥಾನಕ್ಕೆ ಈ ಸ್ವಾತಂತ್ರ್ಯ ಏಕಿರಬಾರದು ? ಸರ್ವೋಚ್ಚ ನ್ಯಾಯಾಲಯವು ಆ ಸ್ವಾತಂತ್ರ್ಯಕ್ಕೆ ಚ್ಯುತಿಬಾರದಂತೆ ಕಾಪಾಡುವುದು ಆವಶ್ಯಕವಿದೆ. ಇಲ್ಲವಾದರೆ ವ್ಯಕ್ತಿ ಸ್ವಾತಂತ್ರ್ಯದ ಮೇಲೆಯೂ ಅನ್ಯಾಯವಾಗುವುದು.

೪. ಸತ್ತ್ವಗುಣಿ ಅಯ್ಯಪ್ಪ ಸ್ವಾಮಿಯ ಮೂರ್ತಿಯ ದರ್ಶನವನ್ನು ಪಡೆಯುವುದು ರಜೋಗುಣಿ ಪ್ರಜನನ ಕ್ಷಮತೆಗೆ ಅಹಿತಕರ

ನಿರ್ದಿಷ್ಟ ವಯೋಮಾನದ ಸ್ತ್ರೀಯರಲ್ಲಿ ಪ್ರಜನನ ಕ್ಷಮತೆಯಿರುತ್ತದೆ. ಅಧ್ಯಾತ್ಮಶಾಸ್ತ್ರಾನುಸಾರ ಸತ್ವ, ರಜ ಮತ್ತು ತಮ ಈ ತ್ರಿಗುಣ ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ಪ್ರಜನನಕ್ಷಮತೆಯು ರಜೋಗುಣಕ್ಕೆ ಸಂಬಂಧಿಸಿದೆ.

ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿ ಸತ್ತ್ವಗುಣಕ್ಕೆ ಸಂಬಂಧಿಸಿದೆ. ಅವನ ಬ್ರಹ್ಮಚಾರಿ ರೂಪವಿರುವುದರಿಂದ ಅದರಿಂದ ಪ್ರಕ್ಷೇಪಿತಗೊಳ್ಳುವ ಶಕ್ತಿಯು ಪ್ರಜನನ ಕ್ಷಮತೆಗೆ ಆವಶ್ಯಕವಿರುವ ಶಕ್ತಿಯ ವಿರುದ್ಧವಾಗಿದೆ. ಇದರಿಂದ ಆ ವಯೋಮಾನದ ಸ್ತ್ರೀಯರು ದೇವಸ್ಥಾನಕ್ಕೆ ಹೋಗುವುದು ಅವರ ಆರೋಗ್ಯದ ದೃಷ್ಟಿಯಿಂದ ಅಹಿತಕರವಾಗಿದೆ.

೫. ಎಲ್ಲ ಧರ್ಮದವರಿಗಾಗಿ ಬಾಗಿಲು ತೆರೆದಿರುವ ದೇವಸ್ಥಾನ !

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ರೀ ಶಬರಿಮಲೆಯ ದೇವಸ್ಥಾನ ಎಲ್ಲ ಧರ್ಮದವರಿಗಾಗಿ ತೆರೆದಿದೆ. ಇಲ್ಲಿ ಬ್ರಾಹ್ಮಣರಿಗಿಂತ ಶೂದ್ರ ಜನರನ್ನು ಹೆಚ್ಚು ಗೌರವಿಸಲಾಗುತ್ತದೆ. ಮೂಲದಲ್ಲಿಯೇ ಇಲ್ಲಿಯ ಪರಂಪರೆ ಯಾರ ಮೇಲೆಯೂ ಅನ್ಯಾಯ ಮಾಡುವಂತಹದ್ದಾಗಿಲ್ಲ. ಇಂದು ಕ್ರಿಶ್ಚಿಯನ್, ಮುಸಲ್ಮಾನ ಪಂಥಗಳಲ್ಲಿಯೂ ಒಂದು ಜಾತಿಯ ಜನರನ್ನು ಇತರ ಜಾತಿಯ ಜನರನ್ನು ಚರ್ಚ ಅಥವಾ ಮಸೀದಿಗೆ ಪ್ರವೇಶ ನೀಡುವುದಿಲ್ಲ.

೬. ನಿಜವಾದ ವಿಜ್ಞಾನವಾದಿಗಳಾಗಿದ್ದರೆ, ಈ ಕುರಿತು ಅಧ್ಯಯನ ಮಾಡಿರಿ

ಕೆಲವು ಜನರು ತಮ್ಮನ್ನು ಪ್ರಗತಿಪರರು ಮತ್ತು ವಿಜ್ಞಾನವಾದಿಗಳೆಂದು ತಿಳಿದುಕೊಂಡು ಪ್ರಾಚೀನ ಪರಂಪರೆಯನ್ನು ವಿರೋಧಿಸುತ್ತಿದ್ದಾರೆ. ಅರ್ಥಾತ್ ಹೀಗೆ ತಿಳಿದುಕೊಂಡು ತಮ್ಮನ್ನು ತಾವೇತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಿಜವಾದ ವಿಜ್ಞಾನವಾದಿಯಾಗಿದ್ದರೆ, ಅವನು ಅಲ್ಲಿಯ ಎಲ್ಲ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದನು. ‘ಸಾತ್ತ್ವಿಕತೆಯೆಂದರೆ ಏನು ?, ‘ಅದರ ಪ್ರಮಾಣವೆಷ್ಟು ?, ‘ಅಲ್ಲಿಯ ಶಕ್ತಿ, ಇವುಗಳ ಅಧ್ಯಯನ ಮಾಡಲು ಬಹಳಷ್ಟು ವೈಜ್ಞಾನಿಕ ಉಪಕರಣಗಳು ಈಗ ಉಪಲಬ್ಧವಿದೆ. ಅವುಗಳನ್ನು ಉಪಯೋಗಿಸಿ ಈ ಪ್ರಗತಿಪರರೆಂದು ಹೇಳುವವರು ಅಧ್ಯಯನ ಮಾಡಿ ನೋಡಬೇಕು. – ಶ್ರೀ. ಸುಮಿತ ಸರೋದೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೧.೧೦.೨೦೧೮)