‘ಧಾರ್ಮಿಕ ಉತ್ಸವಗಳ ನಿಮಿತ್ತಬೃಹತ್ ಪ್ರಮಾಣದಲ್ಲಿ ಮತ್ತು ಭಾರಿ ಬೆಲೆಯ ಪಟಾಕಿಗಳನ್ನು ಸಿಡಿಸುವುದನ್ನು ಶೋಭೆ ಎಂದು ತಿಳಿಯುವವರೇ, ಮುಂದಿನ ಅಂಶಗಳನ್ನು ಅಂತರ್ಮುಖರಾಗಿ ವಿಚಾರ ಮಾಡಿರಿ !
೧. ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿದರೆ ಅದರಿಂದ ಬಹಳಷ್ಟು ಪ್ರಮಾಣದಲ್ಲಿ ಧ್ವನಿಮಾಲಿನ್ಯ ಮತ್ತು ವಾಯುಮಾಲಿನ್ಯವಾಗುತ್ತದೆ. ಸಮಷ್ಟಿಗೆ ಹಾನಿಯನ್ನುಂಟುಮಾಡುವ ಈ ಪಾಪದಲ್ಲಿ ಏಕೆ ಪಾಲುದಾರರಾಗುತ್ತೀರಿ ?
೨. ರಾತ್ರಿ ತುಂಬಾ ಸಮಯದವರೆಗೆ ಪಟಾಕಿ ಸಿಡಿಸುವುದರಿಂದ ಇತರರ ನಿದ್ದೆಗೆಟ್ಟು ಅವರು ಮಾನಸಿಕ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ರೀತಿ ಇತರರಿಗೆ ತೊಂದರೆ ನೀಡಿ ಉತ್ಸವವನ್ನು ಆಚರಿಸುವವರ ಮೇಲೆ ಎಂದಾದರೂ ದೇವರ ಕೃಪೆಯಾಗಬಹುದೇ ?
೩. ಹಿಂದೂಗಳು ತಡರಾತ್ರಿಯವರೆಗೆ ಪಟಾಕಿ ಸಿಡಿಸುವುದರಿಂದ ‘ಮುಸಲ್ಮಾನರು ಬೆಳಗ್ಗೆ ಬಾಂಗ್ ನೀಡಿ ಎಲ್ಲರ ನಿದ್ದೆಗೆಡಿಸುವುದು ಅಯೋಗ್ಯವಿದೆ’, ಎಂದು ಹೇಳುವ ಅಧಿಕಾರ ಹಿಂದೂಗಳಿಗೆ ಉಳಿಯುವುದೇ ?
೪. ಪಟಾಕಿ ಸಿಡಿಸಿ ಹಣವನ್ನು ಪೋಲು ಮಾಡುವುದಕ್ಕಿಂತ ಅದೇ ಹಣ ರಾಷ್ಟ್ರದಲ್ಲಿನ ಅರೆ ಹೊಟ್ಟೆಯಲ್ಲಿರುವ ಜನತೆಗೆ ಹಂಚಿದರೆ ಅಥವಾ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕೆ ಅರ್ಪಣೆ ಮಾಡಿದರೆ, ದೇವರು ಖಂಡಿತ ಕೃಪೆ ಮಾಡಬಹುದಲ್ಲವೇ !
ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಬಾಂಧವರೇ, ಧಾರ್ಮಿಕ ಉತ್ಸವಗಳ ನಿಮಿತ್ತದಿಂದ ಹಿಂದೂ ಬಾಂಧವರಿಂದ ಮತ್ತು ಉತ್ಸವ ಮಂಡಳಿಗಳಿಂದಾಗುವ ಮೇಲಿನ ತಪ್ಪುಗಳ ಕುರಿತು ಅವರ ಪ್ರಬೋಧನೆ ಮಾಡಿರಿ !
ಅಗತ್ಯವಿದ್ದಲ್ಲಿ ಆ ಕುರಿತು ಹಿಂದೂ ಜನಜಾಗೃತಿ ಸಮಿತಿಯು ನಿಮಗೆ ಸಹಾಯ ಮಾಡುವುದು !
ಕಾನೂನುಬಾಹಿರವಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರೆ, ಆ ಬಗ್ಗೆ ಪೊಲೀಸರಲ್ಲಿ ಕಾನೂನುಪ್ರಕಾರ ದೂರು ನೀಡಿರಿ. ಧಾರ್ಮಿಕ ಉತ್ಸವಗಳನ್ನು ಆಚರಿಸುವುದು ಯಾವ ರೀತಿ ಹಿಂದೂಗಳಿಗೆ ಪವಿತ್ರ ಧರ್ಮ ಕರ್ತವ್ಯವಾಗಿದೆಯೊ, ಹಾಗೆಯೇ ಧಾರ್ಮಿಕ ಉತ್ಸವಗಳಲ್ಲಿನ ತಪ್ಪು ಆಚರಣೆಗಳನ್ನು ತಡೆಯುವುದು ಸಹ ಹಿಂದೂಗಳಿಗೆ ಪವಿತ್ರ ಧರ್ಮಕರ್ತವ್ಯವೇ ಆಗಿದೆ !’ – (ಪೂ.) ಶ್ರೀ. ಸಂದೀಪ ಆಳಶಿ (೩೦.೮.೨೦೧೭)